ಡಿಸೆಂಬರ್ ನ ಕೈಗಾರಿಕಾ ಉತ್ಪಾದನೆ ಕುಸಿತ

ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್‌ನಲ್ಲಿ ಶೇ.(-)1.3 ರಷ್ಟು ಕುಸಿದಿದೆ. 2014 ರ ಡಿಸೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.3 .6 ರಷ್ಟಿತ್ತು.
ಕೈಗಾರಿಕಾ ಉತ್ಪಾದನೆ ಕುಸಿತ
ಕೈಗಾರಿಕಾ ಉತ್ಪಾದನೆ ಕುಸಿತ

ನವದೆಹಲಿ: ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್‌ನಲ್ಲಿ ಶೇ.(-)1.3 ರಷ್ಟು ಕುಸಿದಿದೆ. 2014 ರ ಡಿಸೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.3 .6 ರಷ್ಟಿತ್ತು.
ಫೆ.12 ರಂದು ಬಿಡುಗಡೆಯಾಗಿರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮಾಹಿತಿ ಪ್ರಕಾರ, ಉತ್ಪಾದನೆ ಕುಸಿತವಾಗಿದ್ದರೂ ಕಳೆದ ತಿಂಗಳಿಗಿಂತ(-)3 .42 ಕ್ಕಿಂತ ಈ ತಿಂಗಳು ಕಡಿಮೆ ಕುಸಿತ ದಾಖಲಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ  ಒಟ್ಟಾರೆ ಕಾರ್ಖಾನೆ ಉತ್ಪಾದನೆ ಶೇ.3 .1 ಏರಿಕೆಯಾಗಿದೆ. 
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆಯ ಒಟ್ಟು ಬೆಳವಣಿಗೆ ಶೇ.2.6 ರಷ್ಟಿತ್ತು. ಉತ್ಪಾದನೆ ಕುಂಟಿತವಾಗಿರುವುದರಿಂದ ಡಿಸೆಂಬರ್ ನ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.(-) 2 .4 ರಷ್ಟಾಗಿದ್ದರೆ, ವಿದ್ಯುತ್ ಉತ್ಪಾದನೆಯಲ್ಲಿ ಶೇ.3 .2 ರಷ್ಟು ಏರಿಕೆ ದಾಖಲಾಗಿದೆ. ಇನ್ನು ಗಣಿಗಾರಿಕೆಯ ಉತ್ಪಾದನೆ ಶೇ.2 .9 ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com