ವಿಶ್ವಬ್ಯಾಂಕ್ 2016 ರ ಮುನ್ನೋಟದಲ್ಲಿ ಜಾಗತಿಕ ಬೆಳವಣಿಗೆ ಶೇ.2 .9 ಕ್ಕೆ ಇಳಿಕೆ

2016 ನೇ ಸಾಲಿನ ಜಾಗತಿಕ ಬೆಳವಣಿಗೆ ಮುನ್ನೋಟವನ್ನು ವಿಶ್ವಬ್ಯಾಂಕ್ ಶೇ.2 .9 ಕ್ಕೆ ಕಡಿತಗೊಳಿಸಿದೆ.
ವಿಶ್ವಬ್ಯಾಂಕ್
ವಿಶ್ವಬ್ಯಾಂಕ್

ವಾಷಿಂಗ್ಟನ್: 2016 ನೇ ಸಾಲಿನ ಜಾಗತಿಕ ಬೆಳವಣಿಗೆ ಮುನ್ನೋಟವನ್ನು ವಿಶ್ವಬ್ಯಾಂಕ್ ಶೇ.2 .9 ಕ್ಕೆ ಕಡಿತಗೊಳಿಸಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕ್ಷೀಣಿಸಿರುವ ಅಭಿವೃದ್ಧಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

2015 ರ ಜೂನ್ ನಲ್ಲಿ ವಿಶ್ವಬ್ಯಾಂಕ್ ಮಂಡಿಸಿದ್ದ ಮುನ್ನೋಟಕ್ಕಿಂತಲೂ ಪ್ರಸಕ್ತ ಸಾಲಿನ ಮುನ್ನೋಟ ಶೇ.0 .4 ರಷ್ಟು ಕಡಿಮೆ ಇದ್ದು, ಶೇ 2 .9 ರಷ್ಟು ಮಾತ್ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಅಭಿವೃದ್ಧಿಶೀಲ ಆರ್ಥಿಕತೆ ಇರುವ ರಾಷ್ಟ್ರಗಳಲ್ಲಿ ಶೇ.4 .8 ರಷ್ಟು ಬೆಳವಣಿಗೆ ದಾಖಲಾಗುವ ಸಾಧ್ಯತೆ ಇದ್ದು, ಅಭಿವೃದ್ಧಿ ಹೊಂದಿರುವ ಆರ್ಥಿಕತೆ ಇರುವ ರಾಷ್ಟ್ರಗಳಲ್ಲಿ ಶೇ.2 .1 ರಷ್ಟು ಮಾತ್ರ ಬೆಳವಣಿಗೆ ನಿರೀಕ್ಷಿಸಲಾಗಿದೆ.

ವಿಶ್ವ ಬ್ಯಾಂಕ್ ನ ವರದಿ ಪ್ರಕಾರ ಈಗಷ್ಟೆ ಮುಕ್ತಾಯಗೊಂಡಿರುವ 2015 ವರ್ಷ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದಂತೆ ನಿರಾಶಾದಾಯಕ ವರ್ಷವಾಗಿದ್ದರೆ, 2016 ರಿಸ್ಕಿ(ಸವಾಲಿನ) ವರ್ಷ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ.

ಭಾರತ ಹಾಗೂ ಚೀನಾದಲ್ಲಿ ಶೇ.7 ಆಸುಪಾಸಿನಲ್ಲಿ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. 2016 ರ ಜಾಗತಿಕ ಬೆಳವಣಿಗೆ ಸರಕು ಬೆಲೆಗಳ ಸ್ಥಿರತೆ, ಹೆಚ್ಚು ಆದಾಯ ಇರುವ ರಾಷ್ಟ್ರಗಳ ಬೆಳವಣಿಗೆ ಗತಿಯನ್ನು ಆಧರಿಸಿರುತ್ತದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com