ವಿಪ್ರೊ ಲಾಭ ಶೇ.2 ಏರಿಕೆ

ದೇಶದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ ಡಿಸೆಂಬರ್‍ಗೆ ಕೊನೆಗೊಂಡ ಮೂರನೆ ತ್ರೈಮಾಸಿಕದಲ್ಲಿ ರು.2,234.10 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಗಳಿಸಿದ್ದ ರು.2,192.8ಕ್ಕೆ ಹೋಲಿಸಿದರೆ ಶೇ.1.8ರಷ್ಟು ಏರಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು; ದೇಶದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ ಡಿಸೆಂಬರ್‍ಗೆ ಕೊನೆಗೊಂಡ ಮೂರನೆ ತ್ರೈಮಾಸಿಕದಲ್ಲಿ ರು.2,234.10 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಗಳಿಸಿದ್ದ ರು.2,192.8ಕ್ಕೆ ಹೋಲಿಸಿದರೆ ಶೇ.1.8ರಷ್ಟು ಏರಿದೆ. ಈ ಅವಧಿ ಯಲ್ಲಿ ಕಂಪನಿ ಒಟ್ಟಾರೆ ಆದಾಯದಲ್ಲಿ ಶೇ.7ರಷ್ಟು ಏರಿಕೆಯಾಗಿದ್ದು ರು.12,861 ಕೋಟಿಗೆ ತಲುಪಿದೆ.

ಆದರೂ ಕಂಪನಿಯ ಈ ಆದಾಯ ಮಾರುಕಟ್ಟೆ ಅಂದಾಜುಗಳಿಗಿಂತಲೂ ಕಡಿಮೆಯಾಗಿದೆ. ಕಳೆದ ವರ್ಷದಅಂತ್ಯದಲ್ಲಿ ಚೆನ್ನೈನಲ್ಲಿ ಸಂಭವಿಸಿದ ಪ್ರವಾಹದಿಂದ ಕಾರ್ಯಾಚರಣೆಗೆ
ಹಿನ್ನಡೆಯಾಗಿದ್ದು ಸಹ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸುದ್ದಿಗೋಷ್ಠಿಯಲ್ಲಿ ವರದಿ ಪ್ರಕಟಿಸಿ ಮಾತನಾಡಿದ ಕಂಪನಿ ಸಿಇಒ ಅಬಿದ್ ಅಲಿ ನೀಮಚ್‍ವಾಲಾ, ಒಟ್ಟಾರೆ ಆದಾಯದಲ್ಲಿ ಐಟಿ ಕ್ಷೇತ್ರದಿಂದ ರು.12,315 ಕೋಟಿ ಗಳಿಸಲಾಗಿದೆ. ಈ ವಿಭಾಗ ವಾರ್ಷಿಕ ಶೇ.9ರಷ್ಟು ಪ್ರಗತಿ ಸಾಧಿಸುತ್ತಿದೆ. ವಿಶ್ವದ ದೊಡ್ಡ-ದೊಡ್ಡ ಸಂಸ್ಥೆಗಳಿಗೆ ಸೇವೆ ಒದಗಿಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಡಿಜಿಟಲ್ ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ವರ್ಷ 10 ಸಾವಿರ ಸಿಬ್ಬಂದಿಗೆ ಡಿಜಿಟಲ್ ತಂತ್ರಜ್ಞಾನ ತರಭೇತಿ ನೀಡಲಾಗಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com