ರಿಲಯನ್ಸ್ ಲಾಭ ಶೇ.38 ಏರಿಕೆ

ದೇಶದ ಖಾಸಗಿ ವಲಯದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಮೂರನೆ ತ್ರೈಮಾಸಿಕದಲ್ಲಿ ಮಾರುಕಟ್ಟೆ ಅಂದಾಜುಗಳನ್ನು ಮೀರಿ ಲಾಭ ಗಳಿಸಿದೆ...
ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ (ಸಂಗ್ರಹ ಚಿತ್ರ)
ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದ ಖಾಸಗಿ ವಲಯದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಮೂರನೆ ತ್ರೈಮಾಸಿಕದಲ್ಲಿ ಮಾರುಕಟ್ಟೆ ಅಂದಾಜುಗಳನ್ನು ಮೀರಿ ಲಾಭ ಗಳಿಸಿದೆ.

ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ಈ ಅವಧಿಯಲ್ಲಿ ಕಂಪನಿ ರು.7,290 ಕೋಟಿ ನಿವ್ವಳ ಲಾಭ ಗಳಿಸಿದೆ. ಕಂಪನಿ ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.5,256 ಕೋಟಿಗೆ ಹೋಲಿಸಿದರೆ ಶೇ.38ರಷ್ಟು ಏರಿಕೆ ದಾಖಲಿಸಿದೆ. ಹಾಗಿದ್ದರೂ ಕಂಪನಿ ಮಾರಾಟ ಶೇ.24ರಷ್ಟು ಕುಸಿದು ರು.73,341 ಕೋಟಿಗೆ ತಲುಪಿದೆ. ಈ ತ್ರೈಮಾಸಿಕದಲ್ಲಿ ತೈಲ ರಿಫೈನಿಂಗ್‍ನಿಂದ ಗಳಿಸಿದ ಆದಾಯ  ಕಳೆದ ಏಳು ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ಮಂಗಳವಾರ ಪ್ರಕಟಿಸಿದ ಹಣಕಾಸು ವರದಿಗಳಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com