ಪಿಎಫ್ ಬಡ್ಡಿ ದರ ಶೇ. 8.95ಕ್ಕೆ ಏರಿಕೆ..?

ಉದ್ಯೋಗಸ್ಥರ ನಿವೃತ್ತಿ ಬಳಿಕದ ಜೀವನಾಧಾರ ಭವಿಷ್ಯನಿಧಿ (ಪಿಎಫ್) ನ ಬಡ್ಡಿ ದರವನ್ನು ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ...
ಪಿಎಫ್ ಬಡ್ಡಿ ದರ ಏರಿಕೆ (ಸಂಗ್ರಹ ಚಿತ್ರ)
ಪಿಎಫ್ ಬಡ್ಡಿ ದರ ಏರಿಕೆ (ಸಂಗ್ರಹ ಚಿತ್ರ)

ನವದೆಹಲಿ: ಉದ್ಯೋಗಸ್ಥರ ನಿವೃತ್ತಿ ಬಳಿಕದ ಜೀವನಾಧಾರ ಭವಿಷ್ಯನಿಧಿ (ಪಿಎಫ್) ನ ಬಡ್ಡಿ ದರವನ್ನು ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಸಂಬಂಧ ರಚನೆಯಾಗಿದ್ದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಹಣಕಾಸು ಸಮಿತಿ ಬಡ್ಡಿ ದರ ಏರಿಕೆ ಮಾಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಪ್ರಸ್ತುತವಿರುವ  ಶೇ.8.75 ಬಡ್ಡಿ ದರವನ್ನು ಶೇ.8.95ಕ್ಕೆ ಏರಿಕೆ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಪ್ರಸ್ತುತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಹಣಕಾಸು ಸಮಿತಿಯ ಶಿಫಾರಸನ್ನು ಕೇಂದ್ರ ವಿತ್ತ ಇಲಾಖೆಯ ಅನುಮೋದನೆಗೆ ಕಳುಹಿಸಲಾಗಿದ್ದು, ಇಲಾಖೆಯಿಂದ ಅನುಮೋದನೆ  ದೊರೆತರೆ ಪ್ರಸ್ತುತವಿರುವ ಶೇ.8.75 ಬಡ್ಡಿ ದರ ಶೇ.8.95ಕ್ಕೆ ಏರಿಕೆಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಸುಮಾರು 5 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ.  ಈ ಹಿಂದೆ ಸರ್ವಕಾಲಿಕ ಅಧಿಕ ಅಂದರೆ 2010-11ರಲ್ಲಿ 9.5ರಷ್ಟು ಬಡ್ಡಿ ದರ ನೀಡಲಾಗಿತ್ತು.

ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್  ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆಗ ಕೇಂದ್ರ ಸರ್ಕಾರ ಪಿಎಫ್ ಮೇಲಿನ ಬಡ್ಡಿದರ  ಏರಿಕೆ ಮಾಡುವ ಕುರಿತು ಒಲವು ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com