ಇಎಸ್ ಐ. ಪಿಎಫ್ ತಪಾಸಣೆ ಮುಕ್ತ
ನವದೆಹಲಿ: ಸ್ಟಾರ್ಟ್ ಅಪ್ ಗಳನ್ನು ಮೂರು ವರ್ಷ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಭವಿಷ್ಯ ನಿಧಿ ಸಂಸ್ಥೆ ಮತ್ತು ಕಾರ್ಮಿಕರ ರಾಜ್ಯ ವಿಮೆ ಸಂಸ್ಥೆಗೆ ನಿರ್ದೇಶನ ನಿಡೀದೆ.
ಸ್ಟಾರ್ಟ್ ಅಪ್ ಗಳ ಪ್ರೋತ್ಸಾಹಕ್ಕೆ ಪ್ರಧಾನಿಳು ಕೈಗೊಂಡ ಕ್ರಮಗಳ ಹಾದಿಯಲ್ಲೇ ಸಾಗಿರುವ ಕೇಂದ್ರ ಕಾರ್ಮಿಕ ಸಚಿವಾಲಯ 9 ಕಾರ್ಮಿಕ ಕಾನೂನುಗಳಿಗೆ ಉದ್ಯಮಿಗಳು ಕೇವಲ ಸ್ವಯಂ ದೃಢೀಕರಣ ಪತ್ರ ಸಲ್ಲಿಸಿದರೆ ಸಾಕು ಎಂದು ಇತ್ತೀಚೆಗೆ ಬಿಡುಗಡೆ ಮಾಡಿರುವ ನಿರ್ದೇಶನದಲ್ಲಿ ಹೇಳಿದೆ.
ಸ್ಟಾರ್ಟ್ ಅಪ್ ಗಳಿಗೆ ವಿಶೇಷ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳು ಅಗತ್ಯವಾಗಿದೆ. ಇಂತಹ ಕಂಪನಿಗಳು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸ್ವಯಂ ಪ್ರಮಾಣ ಪತ್ರಗಳನ್ನು ಸಲ್ಲಿಸಿದರೂ ಸಾಕು ಎಂದು ಕಾರ್ಮಿಕ ಕಾರ್ಯದರ್ಶಿ ಶಂಕರ್ ಅಗರ್ವಾಲ್ ಹೇಳಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾಯ್ದೆ, ಅಂತಾರಾಜ್ಯ ವಲಸೆ ಕಾರ್ಮಿಕ ಕಾಯ್ದೆ, ವೇತನ ಮತ್ತು ಗ್ರಾಚುಟಿ ಕಾಯ್ದೆ ಗುತ್ತಿಗೆ ಕಾರ್ಮಿಕ ಕಾಯ್ದೆ, ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ ಸೇರಿದಂತೆ ಹಲವು ನಿಯಮಗಳು ಅನ್ವಯವಾಗದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ