ಮಾಲಿನ್ಯ ಪ್ರಮಾಣ ವಂಚನೆ: ವೋಕ್ಸ್ ವ್ಯಾಗನ್ ನಿಂದ 14.7 ಬಿಲಿಯನ್ ಡಾಲರ್ ದಂಡ ಪಾವತಿ

ಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಾದ ನಂತರ ವೋಕ್ಸ್ ವ್ಯಾಗನ್ ಕಾರು ತಯಾರಿಕಾ ಸಂಸ್ಥೆ ಅಮೆರಿಕಾದಲ್ಲಿ ಸುಮಾರು 14.7 ಬಿಲಿಯನ್ ಡಾಲರ್ ದಂಡ ಪಾವತಿ ಮಾಡಲಿದೆ.
ವೋಕ್ಸ್ ವ್ಯಾಗನ್
ವೋಕ್ಸ್ ವ್ಯಾಗನ್

ವಾಷಿಂಗ್ ಟನ್: ಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಾದ ನಂತರ ವೋಕ್ಸ್ ವ್ಯಾಗನ್ ಕಾರು ತಯಾರಿಕಾ ಸಂಸ್ಥೆ ಅಮೆರಿಕಾದಲ್ಲಿ ಸುಮಾರು 14.7 ಬಿಲಿಯನ್ ಡಾಲರ್ ದಂಡ ಪಾವತಿ ಮಾಡಲಿದೆ.

ಜರ್ಮನಿ ಕಾರು ತಯಾರಿಕಾ ಸಂಸ್ಥೆ ಹಾಗೂ ಅಮೆರಿಕದ ಅಧಿಕಾರಿಗಳ ನಡುವೆ ನಡೆದಿರುವ ಒಪ್ಪಂದದ ಪ್ರಕಾರ ವೋಕ್ಸ್ ವ್ಯಾಗನ್ ಸಂಸ್ಥೆ 14.7 ಬಿಲಿಯನ್ ಡಾಲರ್ ದಂಡ ಪಾವತಿ ಮಾಡಲು ಒಪ್ಪಿಕೊಂಡಿದೆ. ಜೂ.27 ರಂದು ಅಮೆರಿಕ ಮಾಧ್ಯಮಗಳಿಗೆ ಈ ಕುರಿತ ಮಾಹಿತಿ ದೊರೆತಿದ್ದು, ಅಮೆರಿಕದ ಸ್ಯಾನ್ ಫ್ರಯಾನ್ಸಿಸ್ಕೊ ನ್ಯಾಯಾಲಯ ವೋಕ್ಸ್ ವ್ಯಾಗನ್ ನ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವವರೆಗೂ ಈ ಅಮೆರಿಕ ಅಧಿಕಾರಿಗಳು ಹಾಗೂ ವೋಕ್ಸ್ ವ್ಯಾಗನ್ ನಡುವಿನ ಒಪ್ಪಂದವನ್ನು ಬಹಿರಂಗಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ನ್ಯೂಯಾರ್ಕ್ ಟೈಮ್ಸ್ ನ ವರದಿಯ ಪ್ರಕಾರ ಹಗರಣ ಬಯಲಾಗುವುದಕ್ಕೂ ಮುನ್ನ ಮಾರಾಟ ಮಾಡಲಾಗಿದ್ದ ಕಾರುಗಳನ್ನು ವಾಪಸ್ ಖರೀದಿಸಲು ವೋಕ್ಸ್ ವ್ಯಾಗನ್ ಸುಮಾರು 10 ಬಿಲಿಯನ್ ಡಾಲರ್ ವ್ಯಯಿಸಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ (ಇಪಿಎ) ಗೆ 2.7 ಬಿಲಿಯನ್ ಪಾವತಿ ಮಾಡಲಿದ್ದು ಮತ್ತೆ 2 ಬಿಲಿಯನ್ ಡಾಲರ್ ನಷ್ಟು ಹಣವನ್ನು ಮಾಲಿನ್ಯ ಪ್ರಮಾಣಕ್ಕೆ ಅನುಗುಣವಾಗಿ ಕಾರುಗಳನ್ನು ತಯಾರಿಸುವ ಹೊಸ ಯೋಜನೆಗೆ ಬಳಕೆ ಮಾಡಲಿದೆ. ಒಟ್ಟಾರೆ ವೋಕ್ಸ್ ವ್ಯಾಗನ್ ಸಂಸ್ಥೆ ವಾಯುಮಾಲಿನ್ಯ ಪ್ರಮಾಣ ವಂಚನೆಗೆ ಸಂಬಂಧಿಸಿದಂತೆ 14.7 ಬಿಲಿಯನ್ ಡಾಲರ್ ದಂಡದ ರೂಪದಲ್ಲಿ ವ್ಯಯಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com