ಸೆಸ್ ಪರಿಣಾಮ ಸರಿದೂಗಿಸಲು ಕಾರುಗಳ ಬೆಲೆ ಏರಿಸಿದ ಮಾರುತಿ ಸುಜುಕಿ

2016 -17 ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕಾರುಗಳ ಮೇಲೆ ಮೇಲೆ ಶೇ 1ರಷ್ಟು ಹೆಚ್ಚುವರಿ ಸೆಸ್‌ ವಿಧಿಸಿರುವ ಪರಿಣಾಮವನ್ನು ಸರಿದೂಗಿಸಲು ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.
ಮಾರುತಿ ಸುಜುಕಿ
ಮಾರುತಿ ಸುಜುಕಿ

ನವದೆಹಲಿ: 2016 -17 ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕಾರುಗಳ ಮೇಲೆ  ಶೇ 1ರಷ್ಟು ಹೆಚ್ಚುವರಿ ಸೆಸ್‌ ವಿಧಿಸಿರುವ ಪರಿಣಾಮವನ್ನು ಸರಿದೂಗಿಸಲು ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.
ಸಂಸ್ಥೆಯ ವಿವಿಧ ಮಾದರಿಗಳ ಕಾರುಗಳ ಬೆಲೆಯಲ್ಲಿ 1 ,441 ರೂ ಯಿಂದ 34 ,494 ರೂ ವರೆಗೆ ಏರಿಕೆಯಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಸಿಯಾಜ್ ಎಸ್ ಹೆಚ್ ವಿಎಸ್ ಹಾಗೂ ಅರ್ಟಿಗಾ ಎಸ್ ಹೆಚ್ ವಿ ಎಸ್ ಮಾದರಿಯ ಕಾರುಗಳು ಸೆಸ್ ನಿಂದ ಹೊರತಾಗಿರುವುದರಿಂದ ಈ ಮಾದರಿಯ ಕಾರುಗಳಲ್ಲಿ ಬೆಲೆ ವ್ಯತ್ಯಾಸವಾಗುವುದಿಲ್ಲ. 
ಜರ್ಮನಿ ಮೂಲದ ಮರ್ಸಿಡೀಸ್ ಬೆನ್ಜ್ ಕಾರು ಸಹ ಮಾರ್ಚ್.15 ರ ನಂತರ ಸಂಪೂರ್ಣ ಉತ್ಪನ್ನಗಳ ಬೆಲೆಯನ್ನು 5 ಲಕ್ಷದ ವರೆಗೆ ಏರಿಕೆ ಮಾಡುವ ಯೋಚನೆಯಲ್ಲಿದ್ದರೆ, ಟಾಟಾ ಮೋಟಾರ್ಸ್ ಈಗಾಗಲೇ ೨,೦೦೦ ರೂಪಾಯಿಯಿಂದ 35 ,000 ರೂಪಾಯಿ ವರೆಗೆ ಬೆಲೆ ಏರಿಕೆ ಮಾಡಿದೆ. ಹುಂಡೈ ಮೋಟಾರ್ ಇಂಡಿಯಾ ಸಹ ಇದೇ ಹಾದಿಯಲ್ಲಿ ಸಾಗಲು ಸಿದ್ಧವಾಗಿದ್ದು  3,೦೦೦ ರಿಂದ 80 ,000 ರೂ ವರೆಗೆ ಬೆಲೆ ಏರಿಕೆ ಮಾಡಲು ಸಿದ್ಧತೆ ನಡೆಸಿದೆ. 
ಫೆ.29 ರಂದು ಮಂಡನೆಯಾದ ಬಜೆಟ್ ನಲ್ಲಿ ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ಚಾಲಿತ ಸಣ್ಣ ಕಾರುಗಳ (4 ಮೀಟರ್‌ಗಿಂತ ಕಡಿಮೆ ಉದ್ದ) ಮೇಲೆ  ಶೇ 1ರಷ್ಟು ಸೆಸ್‌. 1500 ಸಿ.ಸಿ. ಸಾಮರ್ಥ್ಯದವರೆಗಿನ ಡೀಸೆಲ್ ಎಂಜಿನ್ ಇರುವ  ಮತ್ತು 4 ಮೀಟರ್‌ಗಿಂತ ಕಡಿಮೆ ಉದ್ದದ ಕಾರುಗಳ ಮೇಲೆ ಶೇ 2.5ರಷ್ಟು  ಸೆಸ್ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com