ಬ್ಯಾಂಕ್ ಗೆ ನಿರಂತರ 4 ದಿನ ರಜೆ: ಎಟಿಎಂನಲ್ಲೂ ಹಣ ಸಿಗೋದು ಕಷ್ಟ

ಬ್ಯಾಂಕ್ ಗಳಿಗೆ ಮತ್ತೆ ನಿರಂತರ ನಾಲ್ಕು ದಿನಗಳ ಕಾಲ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರ ಕಷ್ಟವಾಗಬಹುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬ್ಯಾಂಕ್ ಗಳಿಗೆ ನಿರಂತರ ನಾಲ್ಕು ದಿನಗಳ ಕಾಲ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರ ಕಷ್ಟವಾಗಬಹುದು ಮತ್ತು ಎಟಿಎಂಗಳು ಸಹ ಬೇಗನೆ ಬರಿದಾಗುವ ಸಾಧ್ಯತೆಗಳು ಹೆಚ್ಚಿವೆ.
ಬ್ಯಾಂಕುಗಳಿಗೆ ಮಾರ್ಚ್‌ 24ರಿಂದ ಸಾಲು ಸಾಲು ರಜೆಗಳಿವೆ. 24ರಂದು ಹೋಳಿ ಹಬ್ಬದ ರಜೆ, ಮಾರ್ಚ್‌ 25 ಗುಡ್‌ ಫ್ರೈಡೆ ರಜೆಯಾದ್ರೆ ಮಾರ್ಚ್‌ 26 ನಾಲ್ಕನೇ ಶನಿವಾರದ ರಜೆ, ಇನ್ನು ಮಾರ್ಚ್‌ 27 ಭಾನುವಾರದ ರಜೆಯಾಗಿರುತ್ತದೆ.
ನಿರಂತರ ನಾಲ್ಕು ದಿನಗಳ ರಜೆಯ ಪರಿಣಾಮವಾಗಿ ಬ್ಯಾಂಕ್‌ ಸೇವೆ ಬಹುತೇಕ ನಿಲುಗಡೆಗೆ ಬರುವುದರಿಂದ ಜನರಿಗೆ ತೊಂದರೆಯಾಗುವುದು ಸಹಜ ಮತ್ತು ನಿಶ್ಚಿತ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com