
ಮುಂಬೈ: ಯುಕೆಯಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆ 3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದರಿಂದ ಅಲ್ಲಿನ ಘಟಕವನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಕ್ಲೈಡ್ ಬ್ರಿಡ್ಜ್ ಹಾಗೂ ಡಾಲ್ಜೆಲ್ ಉಕ್ಕು ಕಾರ್ಖಾನೆಗಳನ್ನು ಸ್ಕಾಟ್ ಲ್ಯಾಂಡ್ ನ ಸ್ಥಳಿಯ ಸರ್ಕಾರಕ್ಕೆ ಮಾರಾಟ ಮಾಡುವ ಒಪ್ಪಂದವನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಯುಕೆಯಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆಯನ್ನೂ ಮಾರಾಟಕ್ಕಿಡಲು ನಿರ್ಧಾರ ಪ್ರಕಟಿಸಿದೆ.
ಯುರೋಪ್ ನಲ್ಲಿರುವ ಟಾಟಾ ಉದ್ಯಮದ ಕಾರ್ಯಕ್ಷಮತೆಯನ್ನು ಪರಿಶೀಲಿಸಿರುವ ಟಾಟಾ ಸ್ಟೀಲ್ ಮಂಡಳಿ, ಕಳೆದ 12 ತಿಂಗಳುಗಳಿಂದ ಯುಕೆಯಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆಯ ಹಣಕಾಸು ಸ್ಥಿತಿ ಕಳಪೆಯಾಗಿರುವುದನ್ನು ಪರಿಗಣಿಸಿದ್ದು ಟಾಟಾ ಸ್ಟೀಲ್ ಕಾರ್ಖಾನೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಟಾಟಾ ಸ್ಟೀಲ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಮಟ್ಟದಲ್ಲಿ ಉಕ್ಕಿನ ಬೇಡಿಕೆ ಕಡಿಮೆಯಾಗಿದ್ದು, ಯುಕೆ ಹಾಗೂ ಯುರೋಪ್ ಗಳಲ್ಲಿ ವ್ಯಾಪಾರ ಸ್ಥಿತಿಗತಿಗಳು ಹದಗೆಟ್ಟಿವೆ ಎಂದು ಟಾಟಾ ಉಕ್ಕು ಮಂಡಳಿ ಹೇಳಿದೆ.
Advertisement