ಇನ್ನೂರು ರುಪಾಯಿ ಸಿಮ್ ಖರೀದಿಸಿದರೆ 75 ಜಿಬಿ ಡೇಟಾ, 4500 ನಿಮಿಷ ಕರೆ ಸೌಲಭ್ಯ!

200 ರು. ಬೆಲೆಯಿರುವ ಜಿಯೋ ಸಿಮ್ ನಲ್ಲಿ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ರಿಲಾಯನ್ಸ್ ಜನರನ್ನು ಆಕರ್ಷಿಸಲು ಮುಂದಾಗಿದೆ...
ರಿಲಾಯನ್ಸ್  ಜಿಯೋ
ರಿಲಾಯನ್ಸ್ ಜಿಯೋ
ಮುಂಬೈ: ಟೆಲಿಕಾಂ ಸೇವೆಗಳಲ್ಲಿ ಅತ್ಯದ್ಭುತ ಕೊಡುಗೆಗಳೊಂದಿಗೆ ರಿಲಾಯನ್ಸ್ ಸಂಸ್ಥೆಯ ಜಿಯೋ 5 ಜಿ ಸೇವೆ ಲಗ್ಗೆ ಇಡುತ್ತಿದೆ. ಪ್ರಯೋಗಾರ್ಥ ರಿಲಾಯನ್ಸ್ ಗ್ರೂಪ್ ನೌಕರರಿಗೆ ಈಗಾಗಲೇ 4ಜಿ ಸೇವೆಯನ್ನು ನೀಡಲಾಗಿದೆ. ಮೂರು ತಿಂಗಳ ಹಿಂದೆ ರಿಲಾಯನ್ಸ್ ಜಿಯೋ 4 ಜಿ ಸೇವೆಯನ್ನು ಆರಂಭಿಸಿತ್ತು.
ಶೀಘ್ರದಲ್ಲೇ ಜಿಯೋ 4 ಜಿ ಸೇವೆ ಜನರಿಗೆ ಲಭ್ಯವಾಗಲಿದೆ. ಇದರ ಆರಂಭಿಕ ಕಾರ್ಯಗಳು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ನಡೆಯುತ್ತಿವೆ. 4ಜಿ ಸೇವೆಯನ್ನು ಪರಿಚಯಿಸಲು ಮತ್ತು ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಲು ಡಿಜಿಟಲ್ ಸ್ಟೋರ್‌ನಲ್ಲಿ ಹೆಚ್ಚಿನ ನೌಕರರನ್ನು ನಿಯೋಜಿಸಲಾಗಿದೆ.
ಈಗಾಗಲೇ ಜಿಯೋ ಸಿಮ್ ಕಾರ್ಡ್‌ಗಳು ಮುಂಬೈ ರಿಲಾಯನ್ಸ್ ಸ್ಟೋರ್‌ಗೆ ತಲುಪಿದ್ದರೂ, ಮಾರಾಟಕ್ಕಿರುವ ಆದೇಶ ಇದುವರೆಗೆ ಲಭಿಸಿಲ್ಲ. ಅದೇ ವೇಳೆ ಈ ಸಿಮ್‌ಗಾಗಿ ಲೈಫ್ ಹ್ಯಾಂಡ್ ಸೆಟ್‌ನ್ನೇ ಬಳಸಬೇಕೆ? ಅಥವಾ ಬರೀ ಸಿಮ್ ಮಾತ್ರ ಖರೀದಿಸಿದರೆ ಸಾಕೇ? ಎಂಬುದರ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ನಮಗೆ ಲಭ್ಯವಾಗಿಲ್ಲ ಎಂದು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ನ ನೌಕರರೊಬ್ಬರು ಹೇಳಿದ್ದಾರೆ.  
ಅಂದಹಾಗೆ 200 ರು. ಬೆಲೆಯಿರುವ ಜಿಯೋ ಸಿಮ್ ನಲ್ಲಿ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ರಿಲಾಯನ್ಸ್ ಜನರನ್ನು ಆಕರ್ಷಿಸಲು ಮುಂದಾಗಿದೆ. 
ಮೂರು ತಿಂಗಳಿಗೆ 75 ಜಿಬಿ ಡೇಟಾ ಮತ್ತು 400 ನಿಮಿಷ ಕರೆ ಸೌಲಭ್ಯವನ್ನು ರಿಲಾಯನ್ಸ್ ನೀಡುತ್ತಿದ್ದು, ಜಿಯೋ ಸಿಮ್ ಬಳಕೆದಾರರರಿಗೆ  ರಿಲಾಯನ್ಸ್ ನೀಡುವ ಅತೀ ದೊಡ್ಡ ಆಫರ್ ಆಗಿದೆ ಇದು.
ಅದೇ ವೇಳೆ ಇನ್ನಿತರ ಪ್ಲಾನ್ ಬಗ್ಗೆ ಸ್ಪಷ್ಟ ಮಾಹಿತಿಯನ್ನು ರಿಲಾಯನ್ಸ್ ಬಹಿರಂಗ ಪಡಿಸಿಲ್ಲ. ಇಂಥಾ ಆಫರ್‌ಗಳೊಂದಿಗೆ ಜಿಯೋ 5 ಜಿ ಮಾರುಕಟ್ಟೆಗೆ ಬಂದರೆ ಏರ್‌ಟೆಲ್, ಐಡಿಯಾ ಕೂಡಾ ಹೊಸ ಆಫರ್‌ಗಳನ್ನು ಘೋಷಣೆ ಮಾಡಬೇಕಾಗಿ ಬರುತ್ತದೆ ಅಂತಾರೆ ಮಾರುಕಟ್ಟೆ ತಜ್ಞರು.
ರಿಲಾಯನ್ಸ್ ಜಿಯೋ ಬಗ್ಗೆ ಮಾತನಾಡಿದ ಮುಖೇಶ್ ಅಂಬಾನಿ, ಭಾರತದಲ್ಲಿ ಶೇ. 70 ರಷ್ಟು ಪ್ರದೇಶಗಳಲ್ಲಿ ಜಿಯೋ 4 ಜಿ ಸೇವೆ ಲಭ್ಯವಾಗಲಿದ್ದು ಈಗಿರುವ ಮೊಬೈಲ್ ಗಳ ಇಂಟರ್‌ನೆಟ್ ವೇಗಕ್ಕಿಂತ 80 ಪಟ್ಟು ಹೆಚ್ಚಿನ ವೇಗವನ್ನು ಜಿಯೋ 4 ಜಿ ಕಲ್ಪಿಸಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com