22 ಭಾಷೆಗಳಿರುವ ಲಾವಾ ಫೋನ್ ಬೆಲೆ ರು.1500!

ಬಳಕೆದಾರರು ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಗಳಾದ ಹಿಂದಿ, ಅಸ್ಸಾಮೀಸ್, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ...
ಲಾವಾ ಮೊಬೈಲ್
ಲಾವಾ ಮೊಬೈಲ್
ನವದೆಹಲಿ:  ಭಾರತದ ಲಾವಾ ಮೊಬೈಲ್ ಕಂಪನಿ ಕೆಕೆಟಿ ಅಲ್ಟ್ರಾ ಪ್ಲಸ್ ಯೂನಿಯನ್ ( KKT Ultra+ Union) ಎಂಬ ಹೊಸ ಫೋನ್ ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ರು. 1500 ಬೆಲೆಯಿರುವ ಈ ಹೊಸ ಫೋನ್ನಲ್ಲಿ 22 ಭಾಷೆಗಳು ಲಭ್ಯವಿದೆ.
ಬಳಕೆದಾರರು ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಗಳಾದ ಹಿಂದಿ, ಅಸ್ಸಾಮೀಸ್, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಣಿಪುರಿ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಎಸ್ಸೆಮ್ಮೆಸ್ ಕಳುಹಿಸಬಹುದಾಗಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭಾಷೆಗಳಿರುವ ಮೊಬೈಲ್ ಫೋನ್ನ್ನು ಪರಿಚಯಿಸುತ್ತಿದ್ದು, ಇದು ಡಿಜಿಟಲ್ ಇಂಡಿಯಾಗೆ ಉತ್ತೇಜನ ನೀಡಲಿದೆ ಎಂದು ಲಾವಾ ಕಂಪನಿ ಹೇಳಿದೆ.
2.4 ಇಂಚು ಸ್ಕ್ರೀನ್, ಇನ್ ಬಿಲ್ಟ್ ಡ್ಯುಯೆಲ್ ಸಿಮ್ ಸ್ಲಾಟ್, ಜಿಎಸ್ಎಂ ಫ್ರೀಕ್ವೆನ್ಸಿ, 18 ಗಂಟೆಗಳ ಟಾಕ್ ಟೈಮ್ ಬಾಳಿಕೆ ಬರುವ 1750mAh Li-ion ಬ್ಯಾಟರಿ,  ವಿಜಿಎ ಕ್ಯಾಮೆರಾ, ವಯರ್ ಲೆಸ್  ಎಫ್ಎಂ,  3.5 ಎಂಎಂ ಆಡಿಯೋ ಜಾಕ್, ಡ್ಯುಯೆಲ್ ಚಾರ್ಜಿಂಗ್ ಸೌಲಭ್ಯ, ಬ್ಲೂಟೂತ್ ಸೌಲಭ್ಯ ಈ ಫೋನ್ ನಲ್ಲಿದೆ.
ಡಿಜಿಟಲ್ ಇಂಡಿಯಾದ ಅಂಗವಾಗಿ ಭಾರತದಲ್ಲೇ ನಿರ್ಮಾಣವಾಗಿರುವ ಈ ಫೋನ್ ಭಾವೈಕ್ಯತೆ ಮತ್ತು ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಲಾವಾ ಇಂಟರ್ನ್ಯಾಷನಲ್ನ ಪ್ರಧಾನ ಅಧಿಕಾರಿ ಗೌರವ್ ನಿಗಮ್ ಹೇಳಿದ್ದಾರೆ. 
ಬ್ಯಾಟರಿ, ಹೆಡ್ಸೆಟ್, ಚಾರ್ಜರ್ ಜತೆಗೆ ಲಭ್ಯವಾಗುವ ಈ ಫೋನ್ 1 ವರ್ಷ ವಾರೆಂಟಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com