
ಚೆನ್ನೈ: ಭಾರತದ ವಿದೇಶಿ ವಿನಿಮಯ ಮೀಸಲು 1 .52 ಬಿಲಿಯನ್ ಡಾಲರ್ ನಿಂದ 363 .12 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಆರ್ ಬಿಐ ತಿಳಿಸಿದೆ.
ಶನಿವಾರದಂದು ಆರ್ ಬಿಐ ನ ವಿದೇಶಿ ವಿನಿಮಯ ಅಂಕಿ-ಅಂಶಗಳು ಪ್ರಕಟವಾಗಿದ್ದು, ಏ.22 ರಂದು ಮುಕ್ತಾಯಗೊಂಡ ವಾರದಲ್ಲಿ $361.60 ಬಿಲಿಯನ್ ನಷ್ಟಿದ್ದ ವಿದೇಶ ವಿನಿಮಯ ಮೀಸಲು ಏ.29 ಕ್ಕೆ ಮುಕ್ತಾಯಗೊಂಡ ವಾರದಲ್ಲಿ 363 .12 ಬಿಲಿಯನ್ ಡಾಲರ್ ಗೆ ಏರಿಕೆ ಯಾಗಿದೆ. ಏ.29 ರ ವರೆಗೆ ವಿದೇಶಿ ಕರೆನ್ಸಿ ಸ್ವತ್ತುಗಳು $339.02 ಬಿಲಿಯನ್ ನಷ್ಟಿದ್ದರೆ, ಚಿನ್ನ 20.11 ಬಿಲಿಯನ್ ನಷ್ಟು ಹಾಗೂ ಐಎಂಎಫ್ ನಲ್ಲಿ ಮೀಸಲು ಹಣ 2 .47 ಬಿಲಿಯನ್ನಷ್ಟಿದೆ ಎಂದು ಆರ್ ಬಿಐ ತಿಳಿಸಿದೆ.
Advertisement