ಡಾಲರ್ ಎದುರು 13 ಪೈಸೆಗಳ ಅಲ್ಪ ಚೇತರಿಕೆ ಕಂಡ ರುಪಾಯಿ

ಭಾರತೀಯ ಬ್ಯಾಂಕ್ ಗಳ ಆಂತರಿಕ ವಿದೇಶಿ ವ್ಯವಹಾರ ವೃದ್ದಿಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಅಲ್ಪ ಚೇತರಿಕೆ ಕಂಡಿದೆ..
ಡಾಲರ್ ಎದುರು ರುಪಾಯಿ ಅಲ್ಪ ಚೇತರಿಕೆ (ಸಂಗ್ರಹ ಚಿತ್ರ)
ಡಾಲರ್ ಎದುರು ರುಪಾಯಿ ಅಲ್ಪ ಚೇತರಿಕೆ (ಸಂಗ್ರಹ ಚಿತ್ರ)

ಮುಂಬೈ: ಭಾರತೀಯ ಬ್ಯಾಂಕ್ ಗಳ ಆಂತರಿಕ ವಿದೇಶಿ ವ್ಯವಹಾರ ವೃದ್ದಿಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಅಲ್ಪ ಚೇತರಿಕೆ ಕಂಡಿದೆ.

ಅಮೆರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಇಂದು 13 ಪೈಸೆಗಳ ಅಲ್ಪ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ 66.67ರು. ಗೆ ಏರಿಕೆಯಾಗಿದೆ. ದೇಸಿ ಹೂಡಿಕೆದಾರರ ಮಾರುಕಟ್ಟೆ  ವಹಿವಾಟು ಪ್ರಾರಂಭ ಮತ್ತು ಬ್ಯಾಂಕುಗಳ ಆಂತರಿಕ ವಿದೇಶಿ ವ್ಯವಹಾರ ವೃದ್ದಿಗೊಂಡ ಪರಿಣಾಮ ಡಾಲರ್ ಎದುರು ರುಪಾಯಿ ಮೌಲ್ಯ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ.

ನಿನ್ನೆಯ ವಹಿವಾಟಿನಲ್ಲಿ 3 ಪೈಸೆಯಷ್ಟು ಮೌಲ್ಯ ಕಳೆದುಕೊಂಡಿದ್ದ ರುಪಾಯಿ ಇಂದು ಚೇತರಿಕೆ ವಹಿವಾಟಿನಿಂದಾಗಿ ತನ್ನ ಮೌಲ್ಯವನ್ನು 13ಪೈಸೆಯಷ್ಟು ಏರಿಕೆ ಮಾಡಿಕೊಂಡಿದೆ. ಡಾಲರ್  ಮೌಲ್ಯ ಏರಿಕೆ ಮತ್ತು ಭಾರತೀಯ ಷೇರುಮಾರುಕಟ್ಟೆಯ ಇಳಿಕೆಯ ಪರಿಣಾಮದಿಂದಾಗಿ ಕಳೆದೆರಡು ತಿಂಗಳಿನಿಂದ ರುಪಾಯಿ ಮೌಲ್ಯ ಸತತವಾಗಿ ಇಳಿಕೆ ದಾಖಲಿಸಿತ್ತು. ಇದೀಗ ಮತ್ತೆ  ರುಪಾಯಿ ಮೌಲ್ಯ ಏರಿಕೆಯತ್ತ ಮುಖ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com