'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿ: ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿತ!

ಸಿಎಸ್‌ಇ ವರದಿ ಪ್ರಕಟವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.
'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿಯ ಪರಿಣಾಮ: ಪಶ್ಚಿಮ ಬಂಗಾಳದಲ್ಲಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತ!
'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿಯ ಪರಿಣಾಮ: ಪಶ್ಚಿಮ ಬಂಗಾಳದಲ್ಲಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತ!

ಕೋಲ್ಕತಾ: ಬ್ರೆಡ್‌, ಬನ್‌, ಪಿಜ್ಜಾ, ಬರ್ಗರ್‌ ಹಾಗೂ ಪಾವ್‌ಗಳನ್ನು ತಿಂದರೆ ಮಾರಕ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೇ  ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.
ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಸಂಸ್ಥೆ ನೀಡಿದ್ದ  ಬ್ರೆಡ್, ಬ್ಯಾನ್ ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿಯನ್ನು ಮಾಧ್ಯಮಗಳು ಪ್ರಕಟಿಸುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ. ವರದಿಯಿಂದ ಜನರಲ್ಲಿ ಆತಂಕ ಮೂಡಿಸಿದ್ದು ಬ್ರೆಡ್ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ ಎಂದು ಪಶ್ಚಿಮ ಬಂಗಾಳ ಬೇಕರ್ಸ್ ಸಂಘಟನೆಯ ಮುಖಂಡ ಹಾಗೂ ಸಂಸದ ಇದ್ರಿಸ್ ಅಲಿ ತಿಳಿಸಿದ್ದಾರೆ.
ವರದಿ ಪ್ರಕಾಟವಾಗುವುದಕ್ಕೂ ಮುನ್ನ ಪ್ರತಿ ದಿನ 10 -12 ಲಕ್ಷ ಪೌಂಡ್ ನಷ್ಟು ಬ್ರೆಡ್ ಉತ್ಪಾದನೆಯಾಗುತ್ತಿತ್ತು. ಈ ಪೈಕಿ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೆ 5 ಲಕ್ಷ ಪೌಂಡ್ ನಷ್ಟು ಬ್ರೆಡ್ ಅಗತ್ಯವಿರುತ್ತಿತ್ತು. ಆದರೆ ವರದಿ ಪ್ರಕಟವಾದ ನಂತರ ಶೇ.30 ರಷ್ಟು ಬ್ರೆಡ್ ಉತ್ಪಾದನೆ ಕುಸಿತ ಕಂಡಿದೆ ಎಂದು ಬೇಕರ್ಸ್ ಸಮನ್ವಯ ಸಮಿತಿಯ ಕಾರ್ಯದರ್ಶಿ ಶೇಖ್ ಇಸ್ಲಾಮಿಲ್ ಹುಸೇನ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com