ನಗದು ನೀಡಿ ಚಿನ್ನ ಖರೀದಿ ಮೇಲೆ ಶೇಕಡಾ 1ರಷ್ಟು ತೆರಿಗೆ: ನಿರ್ಧಾರ ಹಿಂತೆಗೆದುಕೊಂಡ ಸರ್ಕಾರ

ನಗದು ನೀಡಿ ಚಿನ್ನ ಖರೀದಿಸಿದವರಿಂದ ಶೇಕಡಾ 1ರಷ್ಟು ತೆರಿಗೆ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಗದು ನೀಡಿ ಚಿನ್ನ ಖರೀದಿಸಿದವರಿಂದ ಶೇಕಡಾ 1ರಷ್ಟು ತೆರಿಗೆ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಸಂದರ್ಭದಲ್ಲಿ ಮಾಡಿದ್ದ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಪರಿಷ್ಕೃತ ನಿಯಮ ನಾಳೆಯಿಂದ (ಜೂನ್ 1)ರಿಂದ ಜಾರಿಗೆ ಬಂದಿದೆ.

ಬಂಗಾರದ ಮೇಲೆ ಶೇಕಡಾ 1ರಷ್ಟು ಸುಂಕ ತೆರಿಗೆ ವಿಧಿಸುವ ಕ್ರಮಕ್ಕೆ ದೇಶಾದ್ಯಂತ ಚಿನ್ನ ವ್ಯಾಪಾರಿಗಳು ಮಾರ್ಚ್ 2ರಂದು ಮುಷ್ಕರ ನಡೆಸಿದ್ದರು.

ಪ್ರಸ್ತುತ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನದ ಮೇಲೆ ಶೇಕಡಾ 10ರಷ್ಟು ಸುಂಕ ವಿಧಿಸಲಾಗುತ್ತದೆ. ಭಾರತ ದೇಶ, ಜಗತ್ತಿನಲ್ಲಿಯೇ ಚಿನ್ನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 900 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com