ಎಸ್ ಬಿಐ ಗೃಹಸಾಲ ಬಡ್ಡಿ ದರ ಕಡಿತ; 6 ವರ್ಷಗಳಲ್ಲೇ ಇದು ಅತಿ ಕಡಿಮೆ!

ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6 ವರ್ಷಗಳಲೇ ಕನಿಷ್ಟ ಪ್ರಮಾಣಕ್ಕೆ ಇಳಿಕೆ ಮಾಡಿದೆ.
ಎಸ್ ಬಿಐ ಗೃಹ ಸಾಲ (ಸಂಗ್ರಹ ಚಿತ್ರ)
ಎಸ್ ಬಿಐ ಗೃಹ ಸಾಲ (ಸಂಗ್ರಹ ಚಿತ್ರ)

ನವದೆಹಲಿ: ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6 ವರ್ಷಗಳಲೇ ಕನಿಷ್ಟ ಪ್ರಮಾಣಕ್ಕೆ ಇಳಿಕೆ ಮಾಡಿದೆ.

ಮೂಲಗಳ ಪ್ರಕಾರ ಎಸ್ ಬಿಐ ಬ್ಯಾಂಕಿನ ಗೃಹಸಾಲದ ಬಡ್ಡಿದರದಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು, ಕಳೆದ ಆರು ವರ್ಷಗಳಲ್ಲಿಯೇ ಬಡ್ಡಿ ಪ್ರಮಾಣದ ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿದೆ  ಎಂದು ತಿಳಿದುಬಂದಿದೆ.

ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದ್ದು, ಪತ್ರಿಕಾ ವರದಿಯನ್ವಯ ಸಾಮಾನ್ಯ ಗ್ರಾಹಕರಿಗೆ ನೀಡಲಾಗುವ ಗೃಹಸಾಲದ ವಾರ್ಷಿಕ ಬಡ್ಡಿ ದರ ಶೇ.9.15ಕ್ಕೆ ಇಳಿಕೆಯಾಗಿದೆ. ಅಂತೆಯೇ  ಮಹಿಳೆಯರಿಗೆ ನೀಡಲಾಗುವ ಗೃಹಸಾಲದ ಬಡ್ಡಿದರವನ್ನು ಕೂಡ ಇಳಿಕೆ ಮಾಡಲಾಗಿದ್ದು, ವಾರ್ಷಿಕ ಬಡ್ಡಿದರವನ್ನು ಶೇ.9.1ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಎಸ್ ಬಿಐ ದಸರಾ  ಹಾಗೂ ದೀಪಾವಳಿ ಹಬ್ಬದ ನಿಮಿತ್ತ ಈ ಆಫರ್ ಘೋಷಣೆ ಮಾಡಿದ್ದು, ನೂತನ ಆಫರ್ ಗಳು ನವೆಂಬರ್ ಹಾಗೂ ಡಿಸೆಂಬರ್ ವರೆಗೂ ಜಾರಿಯಲ್ಲಿರಲಿವೆ ಎಂದು ತಿಳಿದುಬಂದಿದೆ.

ಕಳೆದ ವಾರವಷ್ಟೇ ಎಸ್ ಬಿಐ ಹಾಗೂ ಐಸಿಸಿಐ ಬ್ಯಾಂಕ್ ಗಳು ಸಾಲದ ಬಡ್ಡಿದರವನ್ನು ಕಡಿತಗೊಳಿಸಿ ಮಾರುಕಟ್ಟೆ ಪೈಪೋಟಿಗೆ ಬಾಗಿಲು ತೆರೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com