ನೋಟುಗಳ ಚಲಾವಣೆ ಬಂದ್: ಜನರ ಆತಂಕಪಡುವ ಅಗತ್ಯವೇ ಇಲ್ಲ; ಅರುಣ್ ಜೇಟ್ಲಿ

500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲಾಗುವುದು ಎಂದು ಪ್ರಧಾನ ಮಂತ್ರಿ...
500, 1000 ರೂಪಾಯಿ ಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದ ನಂತರ ಅಮೃತಸರದಲ್ಲಿ  ಬೀದಿಬದಿ ವ್ಯಾಪಾರಿಯೊಬ್ಬ ಸಾರ್ವಜನಿಕರ ಗಮನಕ್ಕೆ ಹಾಕಿರುವ ಸೂಚನೆ
500, 1000 ರೂಪಾಯಿ ಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದ ನಂತರ ಅಮೃತಸರದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ಸಾರ್ವಜನಿಕರ ಗಮನಕ್ಕೆ ಹಾಕಿರುವ ಸೂಚನೆ
ಬೆಂಗಳೂರು: 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಒಂದು ದಿನ ನಂತರ, ಸರ್ಕಾರದ ಕಾರ್ಯತಂತ್ರ ಮತ್ತು ನಿರ್ಣಯದಿಂದ ನಿನ್ನೆಯಿಡೀ ಆರ್ಥಿಕ ಕುಸಿತದ ಭೀತಿ ಎದುರಿಸುವಂತಾಯಿತು.
ಈಗ ಬಳಕೆಯಲ್ಲಿಲ್ಲದ 500 ಮತ್ತು 1 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದರೆ ಅವುಗಳಿಗೆ ತೆರಿಗೆ ವಿನಾಯ್ತಿ ನೀಡಲಾಗುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ನಿನ್ನೆ ಹೇಳಿದ್ದರು. ನಿಮ್ಮಲ್ಲಿರುವ ಹಣ ಕಾನೂನುಬದ್ಧವಾಗಿದ್ದರೆ, ಅಥವಾ ಕಾನೂನುಬದ್ಧವಾಗಿ ಹಣ ಸಂಪಾದಿಸಿ ಅದನ್ನು ಉಳಿತಾಯ ಮಾಡಿದ್ದರೆ ಅವುಗಳನ್ನು ಬಹಿರಂಗಪಡಿಸಬಹುದು, ಆ ಹಣದ ಬಗ್ಗೆ ನೀವು ಗಾಬರಿಪಡುವ ಅಗತ್ಯವಿಲ್ಲ ಎಂದು ಜನತೆಗೆ ಹೇಳಿದ್ದರು.
ಸರಿಯಾದ ಕರೆನ್ಸಿಗಳನ್ನು ಎಲ್ಲಾ ಬ್ಯಾಂಕ್ ಮತ್ತು ಪೋಸ್ಟ್ ಆಫೀಸುಗಳಲ್ಲಿ ನೀಡುತ್ತಾರೆ. ನೋಟುಗಳನ್ನು ನೀಡಿ ಬೇರೆ ನೋಟುಗಳನ್ನು ತೆಗೆದುಕೊಳ್ಳಲು ಮತ್ತು ಈ ವ್ಯವಸ್ಥೆ ಸಹಜತೆಗೆ ಮರಳಲು 2ರಿಂದ 3 ವಾರಗಳ ಕಾಲ ತೆಗೆದುಕೊಳ್ಳಬಹುದು ಎಂದು ಆರ್ ಬಿಐ ಹೇಳಿರುವುದಾಗಿ ಜೇಟ್ಲಿ ಹೇಳಿದ್ದರು.
ಈ ಕುರಿತು ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕ, ಗೊಂದಲಪಡುವ ಅಗತ್ಯವಿಲ್ಲ ಎಂದು ಆರ್ ಬಿಐ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಹೊಸ 500 ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಎಲ್ಲಾ ಎಟಿಎಂಗಳಲ್ಲಿ ನಾಳೆಯಿಂದ ಲಭ್ಯವಾಗಲಿದೆ.
ಸಾಮಾನ್ಯ ಜನರು ಗೃಹಿಣಿಯರು, ರೈತರು ತಮ್ಮ ಹಳೆಯ 500, 1000 ನೋಟುಗಳನ್ನು ಬ್ಯಾಂಕ್ ಮತ್ತು ಪೋಸ್ಟ್ ಆಫೀಸುಗಳಲ್ಲಿ ಠೇವಣಿಯಿರಿಸಲು ಯಾವುದೇ ರೀತಿಯಲ್ಲಿ ಆತಂಕ, ಭಯ ಪಡುವ ಅಗತ್ಯವಿಲ್ಲ. ಮನೆಯ ದಿನನಿತ್ಯದ ಖರ್ಚುಗಳಿಗೆ ಹಣ ಬೇಕೆಂದವರು ಕೂಡ ನೇರವಾಗಿ ಬ್ಯಾಂಕ್ ಗಳಿಗೆ ಹೋಗಿ ಅದೇ ಮೊತ್ತದ ಬೇರೆ ಹಣ ಪಡೆಯಬಹುದು ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರ ಹಣ ಅಕ್ರಮವಾಗಿದ್ದರೆ ಮಾತ್ರ ಆದಾಯದ ಮೂಲವನ್ನು ಬಹಿರಂರಪಡಿಸಬೇಕು, ಅದು ಲಂಚ, ಅಪರಾಧದಿಂದ ಬಂದ ಹಣವಾದರೆ ಮಾತ್ರ ತೊಂದರೆಯಾಗುತ್ತದೆ. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳುವಾಗ ಎಲ್ಲಾ ತೆರಿಗೆ ಕಾನೂನುಗಳು ಅನ್ವಯವಾಗುತ್ತದೆ. ಇಲ್ಲಿ ತೆರಿಗೆಗಳ್ಳರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿರ್ಧಾರ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗೆ ಸಹಾಯವಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಜೊತೆಗೆ ಕಪ್ಪು ಹಣ ನಿಯಂತ್ರಣ ಮತ್ತು ಆರ್ಥಿಕ ಭಯೋತ್ಪಾದನೆ ನಿಗ್ರಹಕ್ಕಾಗಿ 500 ಮತ್ತು 1000 ನೋಟುಗಳನ್ನು ರದ್ದುಮಾಡುವ ಕ್ರಮದಿಂದ ಆರ್ಥಿಕತೆ ದೃಢಗೊಳ್ಳಲಿದ್ದು ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವಿಶ್ವಾಸಾರ್ಹತೆ ವೃದ್ಧಿಯಾಗಲಿದೆ ಎಂದೂ ಹೇಳಿದ್ದಾರೆ.
 ಆದಾಯ ಘೋಷಣೆಯಲ್ಲಿ ನಮೂದಿಸಿ ಮೊತ್ತಕ್ಕಿಂತ ಹೆಚ್ಚಾದ ಹಣಕ್ಕೆ ಶೇಕಡಾ 200ರಷ್ಟು ದಂಡ ವಿಧಿಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರಧಾನಿ 72 ಗಂಟೆಗಳ ಅವಧಿಯವರೆಗೆ ನೋಟು ಸ್ವೀಕರಿಸಲು ಅವಕಾಶ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಮೆಟ್ರೋ, ಔಷಧಿ ಅಂಗಡಿ ಮತ್ತಿತರ ಕಡೆಗಳಲ್ಲಿ 500, 1000 ನೋಟುಗಳನ್ನು ಸ್ವೀಕರಿಸಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com