

ಮುಂಬಯಿ: ಟಾಟಾ ಕೆಮಿಕಲ್ ಬೋರ್ಡ್ ನ ಕಾರ್ಯಕಾರಿ ನಿರ್ವಾಹಕೇತರ ಮತ್ತು ನಾನ್ -ಇಂಡಿಪೆಂಡೆಂಟ್ ನಿರ್ದೇಶಕ ಸ್ಥಾನಕ್ಕೆ ಭಾಸ್ಕರ್ ಭಟ್ ರಾಜೀನಾಮೆ ನೀಡಿದ್ದಾರೆ ಎಂದು ಟಾಟಾ ಕೆಮಿಕಲ್ಸ್ ತಿಳಿಸಿದೆ.
ಟಾಟಾ ಗ್ರೂಪ್ ನ ಅಧ್ಯಕ್ಷ ಸೈರಸ್ ಮಿಸ್ತ್ರಿ, ಅವರನ್ನ ಅವರ ಸ್ಥಾನದಿಂದ ವಜಾಗೊಳಿಸಿದ ನಂತರ ಟಾಟಾ ಕೆಮಿಕಲ್ಸ್ ನ ಸ್ವತಂತ್ರ್ಯ ನಿರ್ದೇಶಕರು ರಾಜೀನಾಮೆ ನೀಡಿರುವ ಬೆಳವಣಿಗೆಯಾಗಿದೆ.
ಟೈಟನ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಭಟ್ ಟಾಟಾ ಗ್ರೂಪ್ ಅನೇಕ ಮಂಡಳಿಗಳಲ್ಲೂ ಸ್ಥಾನ ಪಡೆದಿದ್ದಾರೆ. ಸೈರಸ್ ಮಿಸ್ತ್ರಿ ಭಾಸ್ಕರ್ ಭಟ್ ಮೇಲೆ ಒತ್ತಡ ಹಾಕಿ ರಾಜಿನಾಮೆ ನೀಡುವಂತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.