ನೋಟುಗಳ ಕೊರತೆ ಸಮಸ್ಯೆ ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ: ಅರುಂಧತಿ ಭಟ್ಟಚಾರ್ಯ

ಹೊಸ 500ರ ನೋಟುಗಳನ್ನು ಎಲ್ಲಾ ಬ್ಯಾಂಕುಗಳಲ್ಲಿ ವಿತರಣೆ ಮಾಡುತ್ತಿರುವುದರಿಂದ ಇನ್ನು...
ಕೊಯಂಬತ್ತೂರಿನಲ್ಲಿ ನಡೆದ ಸಮುದಾಯ ಸೇವೆ ಕಾರ್ಯಕ್ರಮದಲ್ಲಿ ಎಸ್ ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಚಾರ್ಯ
ಕೊಯಂಬತ್ತೂರಿನಲ್ಲಿ ನಡೆದ ಸಮುದಾಯ ಸೇವೆ ಕಾರ್ಯಕ್ರಮದಲ್ಲಿ ಎಸ್ ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಚಾರ್ಯ
ಕೊಯಂಬತ್ತೂರು: ಹೊಸ 500ರ ನೋಟುಗಳನ್ನು ಎಲ್ಲಾ ಬ್ಯಾಂಕುಗಳಲ್ಲಿ ವಿತರಣೆ ಮಾಡುತ್ತಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ನೋಟುಗಳ ಕೊರತೆ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಚಾರ್ಯ ತಿಳಿಸಿದ್ದಾರೆ.
ನೋಟುಗಳ ಕೊರತೆ ಎದುರಾಗಬಹುದು ಮತ್ತು ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದೆಂಬ ಭೀತಿಯಿಂದ ಜನರು 100 ರೂಪಾಯಿ ನೋಟುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದಾರೆ. ಹೊಸ 500ರ ನೋಟುಗಳು ಸಾಕಷ್ಟು ವಿತರಣೆಯಾಗಲು ಆರಂಭವಾದ ತಕ್ಷಣ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಹೊಸ 500ರ ನೋಟುಗಳನ್ನು ನಿನ್ನೆ ಚೆನ್ನೈಯ ಎಟಿಎಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಕೆಲ ದಿನಗಳಲ್ಲಿ ದೇಶಾದ್ಯಂತ ನಗರಗಳಲ್ಲಿ ನೋಟುಗಳು ಸಿಗಲಿವೆ. ಕಡಿಮೆ ಮುಖಬೆಲೆಯ ನೋಟುಗಳನ್ನು ಹೆಚ್ಚೆಚ್ಚು ಚಲಾವಣೆ ಮಾಡುವ ಮೂಲಕ ನೋಟುಗಳ ಕೊರತೆಯನ್ನು ನಿವಾರಿಸಬಹುದು ಎಂದು ಅವರು ಹೇಳಿದರು. 
ಹೊಸ 500 ಮತ್ತು 2000 ರೂಪಾಯಿಗಳ ನೋಟುಗಳನ್ನು ನಿಭಾಯಿಸಲು ಶೇಕಡಾ 60ರಷ್ಟು ಎಟಿಎಂಗಳನ್ನು ಮರು ಮಾಪನಾಂಕ ಮಾಡಲಾಗಿದೆ. ಉಳಿದ ಶೇಕಡಾ 40ರಷ್ಟು ಎಟಿಎಂಗಳನ್ನು ಇನ್ನು 5 ದಿನಗಳಲ್ಲಿ ಮಾಪನಾಂಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ನೋಟುಗಳ ನಿಷೇಧದ ನಂತರ ಹೆಚ್ಚಿನ ಜನರು ಹಣದ ಡಿಜಿಟಲ್ ವಹಿವಾಟು ನಡೆಸುತ್ತಿದ್ದಾರೆ. ಡಿಜಿಟಲ್ ವ್ಯವಹಾರ ಶೇಕಡಾ 300ರಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಶೇಕಡಾ 200ರಷ್ಟು ಮೌಲ್ಯದಲ್ಲಿ ಅಧಿಕವಾಗಿದೆ. ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಬಳಸುವವರ ಸಂಖ್ಯೆ ಶೇಕಡಾ 100ರಷ್ಟು ಹೆಚ್ಚಾಗಿದೆ. ಬಹುತೇಕ ಕಂಪೆನಿಗಳು ಪಿಒಎಸ್ ಮೆಶಿನ್ ಗಳ ಮೊರೆ ಹೋಗುತ್ತಿದ್ದಾರೆ. ಎಸ್ ಬಿಐ ವಾಲೆಟ್ ಡೌನ್ ಲೋಡ್ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ಬೃಹತ್ ಪ್ರಮಾಣದಲ್ಲಿ ಠೇವಣಿಯಿಡುವುದಕ್ಕೆ ತಡೆಯೊಡ್ಡಿರುವುದಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅರುಂಧತಿ ಭಟ್ಟಾಚಾರ್ಯ, ಇದರಿಂದ ಕಾರ್ಪೊರೇಟ್ ಕಂಪೆನಿಗಳಿಗೆ ಪರಿಣಾಮ ಬೀರಿರಬಹುದು. ಚಿಲ್ಲರೆ ವಹಿವಾಟುದಾರರ ಮೇಲೆ ಹೆಚ್ಚು ಪರಿಣಾಮ ಬೀರಿರುವುದಿಲ್ಲ.ನೋಟುಗಳ ಅಪಮೌಲಿಕರಣವೆಂದರೆ ಮರು ಬಂಡವಾಳೀಕರಣವೆಂದಲ್ಲ ಎಂದು ಅವರು ಪ್ರತಿಪಾದಿಸಿದರು.
ಅಧಿಕ ಮೌಲ್ಯದ ನೋಟುಗಳ ನಿಷೇಧದ ನಂತರ ಸರ್ಕಾರದ ಆದಾಯ ಹೆಚ್ಚಾದರೂ ಕೂಡ ಅದರ ಒಂದು ಭಾಗವನ್ನು ಮಾತ್ರ ಬ್ಯಾಂಕ್ ಗಳಿಗೆ ನೀಡಲಾಗುತ್ತದೆ. ಬ್ಯಾಂಕುಗಳಲ್ಲಿ ಕೇವಲ 10ರಿಂದ 15 ಶೇಕಡಾದಷ್ಟು ಹಣ ಮಾತ್ರ ಹೊಸದಾಗಿ ಠೇವಣಿಯಾಗಿದೆ. ಉಳಿದ ಹಣ ಚಲಾವಣೆಯಾಗುತ್ತಿರುತ್ತದೆ ಅಥವಾ ಠೇವಣಿಯಿಟ್ಟವರು ಹಿಂಪಡೆಯುತ್ತಾರೆ ಎಂದು ಭಟ್ಟಾಚಾರ್ಯ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com