3 ತಿಂಗಳಲ್ಲಿ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿಗಳ ಮೊತ್ತ 80 ಸಾವಿರ ಕೋಟಿ ರೂ ಏರಿಕೆ

ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯ ಮತ್ತು ಏರಿಕೆಯಾಗುತ್ತಿರುವ ತೆರಿಗೆ ಕಪ್ಪು ಹಣ ಹೊಂದಿರುವವರಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯ ಮತ್ತು ಏರಿಕೆಯಾಗುತ್ತಿರುವ ತೆರಿಗೆ ಕಪ್ಪು ಹಣ ಹೊಂದಿರುವವರಿಗೆ ಒಂದು ಕಡೆ ಬಿಸಿ ತುಪ್ಪವಾಗಿ ಪರಿಣಮಿಸಿದರೆ, ಮರುಪಾವತಿಯಾಗದಿರುವ ಸಾಲ ಗಾಬರಿಯಾಗುವ ರೀತಿಯಲ್ಲಿ ಏರಿಕೆಯಾಗುತ್ತಿದೆ.
ಸಾರ್ವಜನಿಕ ವಲಯ ಬ್ಯಾಂಕುಗಳು ಸಾಲಗಾರರ ಮನ್ನಾ ಮಾಡುವುದು, ಕ್ರೆಡಿಟ್ ದಾರರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿರುವುದು, ಘನ ವಸ್ತುಗಳ ಸಂಗ್ರಹ ಇತ್ಯಾದಿಗಳಿಂದ ಬ್ಯಾಂಕುಗಳಲ್ಲಿ ಮರು ಪಾವತಿಯಾಗದಿರುವ ಮತ್ತು ಅನುತ್ಪಾದಕ ಆಸ್ತಿಗಳ ಮೊತ್ತ ಸುಮಾರು 80,000 ಕೋಟಿ ರೂಪಾಯಿಗಳಷ್ಟು ಕಳೆದ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸೃಷ್ಟಿಯಾಗಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ ವಾರ್, ಕೆಲವೊಂದು ಸಂದರ್ಭಗಳಲ್ಲಿ ಬ್ಯಾಂಕುಗಳು ತಮ್ಮ ಅಗತ್ಯಗಳನ್ನು ಪೂರೈಸಲು ಕಾರ್ಪೊರೇಟ್ ಕಂಪೆನಿಗಳಿಗೆ ಹಣ ನೀಡ ಬೇಕಾಗುತ್ತದೆ. ಅವು ಮರುಪಾವತಿಯಾಗಿರುವುದಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com