ಹಣಕಾಸು ನೀತಿ ಸಮಿತಿ: ತಿಳಿಯಬೇಕಾದ ವಿಷಯಗಳು

ವಿವಿಧ ಹಣಕಾಸು ಯೋಜನೆಗಳ ಬಡ್ಡಿದರವನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಆರು ಸದಸ್ಯರ ಹಣಕಾಸು ನೀತಿ ಸಮಿತಿಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿವಿಧ ಹಣಕಾಸು ಯೋಜನೆಗಳ ಬಡ್ಡಿದರವನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಆರು ಸದಸ್ಯರ ಹಣಕಾಸು ನೀತಿ ಸಮಿತಿಯನ್ನು ರಚಿಸಿತ್ತು. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಮುಖ ಬೆಳವಣಿಗೆ. ಹಾಗಾದರೆ ಹಣಕಾಸು ನೀತಿಯೆಂದರೇನು, ಅದರ ಕಾರ್ಯವಿಧಾನ ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಹಣಕಾಸು ನೀತಿ ಸಮಿತಿ(ಎಂಪಿಸಿ) ಎಂದರೇನು?: ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ದರ ನಿರ್ಧರಿಸಲು ಆರು ಸದಸ್ಯರ ಕಾರ್ಯನಿರ್ವಾಹಕ ಅಂಗವೇ ಹಣಕಾಸು ನೀತಿ ಸಮಿತಿ. ಇದರಲ್ಲಿ ಮೂವರು ಸದಸ್ಯರು ರಿಸರ್ವ್ ಬ್ಯಾಂಕ್ ನವರಾಗಿದ್ದು, ಇನ್ನು ಮೂವರು ಸದಸ್ಯರನ್ನು ಸರ್ಕಾರ ನೇಮಿಸುತ್ತದೆ. ಸಮಿತಿಯ ಮೊದಲ ಸಭೆ ಇಂದು ನಡೆಯುತ್ತಿದ್ದು ನಾಳೆ ಕೂಡ ಮುಂದುವರಿಯಲಿದೆ. ಸಮಿತಿಯ ಅಂತಿಮ ನಿರ್ಧಾರ ಆರ್ ಬಿಐಯ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ.
ಯಾರೆಲ್ಲಾ ಎಂಪಿಸಿಯ ಸದಸ್ಯರು?: ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್, ವಿತ್ತೀಯ ನೀತಿಯ ಉಸ್ತುವಾರಿ ಉಪ ಗವರ್ನರ್ ಆರ್.ಗಾಂಧಿ, ಆರ್ ಬಿಐ ನಾಮಾಂಕಿತ ಕಾರ್ಯಕಾರಿ ಮೈಕೆಲ್ ಪತ್ರ ಇದರ ಸದಸ್ಯರಾಗಿದ್ದು, ಇತರ ಮೂವರು ಸದಸ್ಯರು ಕೇಂದ್ರ ಸರ್ಕಾರದಿಂದ ನಾಮಾಂಕಿತರು. ಪ್ರಸ್ತುತ ಈಗ ಇರುವ ಮೂವರು ಹೊರ ಸದಸ್ಯರಲ್ಲಿ ಶಿಕ್ಷಣ ತಜ್ಞರಾದ ಚೇತನ್ ಘಾಟೆ, ಪಾಮಿ ದುವಾ, ರವೀಂದ್ರ ಎಚ್ ಧೋಲಾಕಿಯಾ ಇದ್ದಾರೆ. ಹೊರಗಿನ ಸದಸ್ಯರ ಅಧಿಕಾರಾವಧಿ 4 ವರ್ಷ.
ಏನು ಆದೇಶ?: ಮುಂದಿನ 5 ವರ್ಷಗಳ ಕಾಲ ಹಣದುಬ್ಬರವನ್ನು ಶೇಕಡಾ 4ರ ದರದೊಳಗೆ ಇರುವಂತೆ ನೋಡಿಕೊಳ್ಳುವುದು, ಬೆಳವಣಿಗೆ ದರವನ್ನು ಗಮನಿಸುತ್ತಿರುವುದು ಇದರ ಕೆಲಸವಾಗಿದೆ. ಯಾವುದೇ ದೇಶದ ಹಣದುಬ್ಬರವನ್ನು ಹತೋಟಿಯಲ್ಲಿಡುವುದು ರಿಸರ್ವ್ ಬ್ಯಾಂಕಿನ ಕೆಲಸವಾಗಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ಆರ್ ಬಿಐ ಇದರ ಒಟ್ಟಿಗೆ ಹಣದ ಹರಿವು, ನಗದು ಮೀಸಲು ಅನುಪಾತ, ಶಾಸನಬದ್ಧ ದ್ರವ್ಯತೆ ಅನುಪಾತ, ಸರ್ಕಾರದ ಬಾಂಡ್ ಗಳು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮತ್ತು ಬ್ಯಾಂಕ್ ಗಳ ನಿಯಮಾವಳಿಗಳನ್ನು ಮಾಡುತ್ತದೆ.
ಎಂಪಿಸಿಯಿಂದ ಬದಲಾವಣೆ ಏನು: ಹಣದುಬ್ಬರ ಸಮಸ್ಯೆಯನ್ನು ನಿಯಂತ್ರಿಸಲು ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ದಕ್ಷತೆಯನ್ನು ತರಲು ಎಂಪಿಸಿ ನೆರವಾಗುತ್ತದೆ.ಅಲ್ಲದೆ ನಿರ್ದಿಷ್ಟ ಗುರಿಯೊಳಗೆ ಹಣದುಬ್ಬರವನ್ನು ಇಡಲೂ ಸಹ ಜವಾಬ್ದಾರನಾಗಿರುತ್ತದೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹೆಚ್ಚು ಸ್ಥಿರತೆ ಮತ್ತು ದಕ್ಷತೆಯನ್ನು ತರಲಿದ್ದು, ಇನ್ನಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತದೆ. ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಸ್ಥಿರವಾದ ಮಾರುಕಟ್ಟೆ ಅತ್ಯಂತ ಅಗತ್ಯವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com