ಗ್ಯಾಲೆಕ್ಸಿ ನೋಟ್ 7 ಮೊಬೈಲ್ ಗಳ ಮಾರಾಟ ಶಾಶ್ವತವಾಗಿ ಸ್ಥಗಿತ?
ಸಿಯೋಲ್: ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗತಗೊಳಿಸಲು ನಿರ್ಧರಿಸಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ನೋಟ್ 7 ಸರಣಿಯ ಮೊಬೈಲ್ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಸ್ಯಾಮ್ ಸಾಂಗ್ ನಿರ್ಧರಿಸಿರುವ ಬಗ್ಗೆ ವರದಿಗಳಾಗಿವೆ.
ದಕ್ಷಿಣ ಕೊರಿಯಾದ ಪತ್ರಿಕೆಯ ವರದಿ ಪ್ರಕಾರ ಸ್ಯಾಮ್ ಸಂಗ್ ಸಂಸ್ಥೆ ಗ್ಯಾಲೆಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾಮ್ ಸಾಂಗ್ ಸಂಸ್ಥೆ ಬಳಕೆದಾರರಿಗೆ ತಾವು ಖರೀದಿಸಿರುವ ನೋಟ್ 7 ಸರಿಣಿಯ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಈಗಾಗಲೇ ಸೂಚಿಸಿದೆ.
ಬಳಕೆದಾರರಿಗೆ ಮೊಬೈಲ್ ಗಳನ್ನು ಬಳಸದಂತೆ ಸೂಚಿಸಿರುವ ಸ್ಯಾಂಗ್ ಸಂಗ್ ಸಂಸ್ಥೆ ನೋಟ್ 7 ಮೊಬೈಲ್ ಬದಲಿಗೆ ಹಣ ಹಿಂತಿರುಗಿಸಲು ಅಥವಾ ಬೇರೆ ಮೊಬೈಲ್ ಎಕ್ಸ್ ಚೈಂಜ್ ಮಾಡಿಕೊಳ್ಳಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಪತ್ರಿಕಾ ವರದಿಯನ್ನು ಹೊರತುಪಡಿಸಿದರೆ ಸ್ಯಾಮ್ ಸಾಂಗ್ ಸಂಸ್ಥೆ ಪ್ರಕಟಣೆಯಲ್ಲಿ ಗಾಲೆಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ