ಜಿಯೋ ದೂರು: ಏರ್ ಟೆಲ್, ವೊಡಾಫೋನ್, ಐಡಿಯಾಗೆ 3 ಸಾವಿರ ಕೋಟಿಗೂ ಅಧಿಕ ದಂಡ!

ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.
ಏರ್ ಟೆಲ್, ವೊಡಾಫೋನ್, ಐಡಿಯಾ 3 ಸಾವಿರ ಕೋಟಿ ದಂಡ
ಏರ್ ಟೆಲ್, ವೊಡಾಫೋನ್, ಐಡಿಯಾ 3 ಸಾವಿರ ಕೋಟಿ ದಂಡ

ನವದೆಹಲಿ: ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ  ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.

ರಿಲಯನ್ಸ್ ಜಿಯೋ ಸಂಸ್ಥೆ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಟ್ರಾಯ್ ನಿನ್ನೆ ತನ್ನ ಅಂತಿಮ ತೀರ್ಪು ನೀಡಿದ್ದು, ಮೂರು ಪ್ರಮುಖ ಟೆಲಿಕಾಮ್ ಸಂಸ್ಥೆಗಳಿಗೆ ಭಾರಿ ದಂಡ ವಿಧಿಸಿದೆ.

ತನ್ನ ಅಗ್ಗದ ಸೇವೆಗಳಿಂದಾಗಿಯೇ ಟೆಲಿಕಾಮ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಜಿಯೋ, ತನ್ನ ಗ್ರಾಹಕರಿಗೆ ಉಚಿತ ಕರೆ ಸೇವೆ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಏರ್ ಟೆಲ್,  ವೊಡಾಫೋನ್, ಐಡಿಯಾ ಸಂಸ್ಥೆಗಳೊಂದಿಗೆ ಸೇರಿ ಪರಸ್ಪರ ನೆಟ್ವರ್ಕ್ ಸಿಗ್ನಲ್ ಪಡೆಯುವ ಪಿಒಐ (Point of interface) ಒಪ್ಪಂದ ಮಾಡಿಕೊಂಡಿತ್ತು. ಆದರೆ ಜಿಯೋ ಗ್ರಾಹಕರಿಗೆ  ಉತ್ತಮ ನೆಟ್ವರ್ಕ್ ಸಿಗದೇ ಕಾಲ್ ಡ್ರಾಪ್ ಆಗುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿದ್ದವು.

ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ಟ್ರಾಯ್ ಗೆ ದೂರು ನೀಡಿತ್ತು. ದೂರಿನಲ್ಲಿ ಒಪ್ಪಂದದ ಹೊರತಾಗಿಯೂ ಈ ಸಂಸ್ಥೆಗಳು ನೆಟ್ವರ್ಕ್ ಸೇವೆ ನೀಡುತ್ತಿಲ್ಲ. ಸಂಸ್ಥೆಯ ಮಾರುಕಟ್ಟೆ  ಪೈಪೋಟಿಯನ್ನು ತಡೆಯುವ ನಿಟ್ಟಿನಲ್ಲಿ ಜಿಯೋ ಗ್ರಾಹಕರಿಗೆ ನೆಟ್ವರ್ಕ್ ಸಮಸ್ಯೆಯನ್ನೊಡ್ಡುತ್ತಿವೆ ಎಂದು ಜಿಯೋ ಆರೋಪಿಸಿತ್ತು. ಜಿಯೋ ವಾದಕ್ಕೆ ಮನ್ನಣೆ ನೀಡಿರುವ ಟ್ರಾಯ್  ಏರ್ ಟೆಲ್,  ವೊಡಾಫೋನ್, ಐಡಿಯಾ 3 ಸಾವಿರ ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಟ್ರಾಯ್ ಆದೇಶದ ವಿರುದ್ಧ ಮೇಲ್ಮನವಿಗೆ ನಿರ್ಧಾರ

ಇನ್ನು ಟ್ರಾಯ್ ನೀಡಿರುವ ದಂಡದ ಆದೇಶದ ವಿರುದ್ಧ  ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಟ್ರಾಯ್ ಆದೇಶ ಏಕಪಕ್ಷೀಯವಾಗಿದೆ ಎಂದು  ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com