ಪಟಾಕಿ ವ್ಯಾಪಾರದಲ್ಲಿ ಚೀನಾ ಸರಕುಗಳಿಗೆ ಕುಸಿದ ಬೇಡಿಕೆ, ದೇಶಿ ಸರಕುಗಳಿಗೆ ಡಿಮಾಂಡ್!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಚೀನಾ ಸರಕುಗಳಿಗೆ ನಿಷೇಧ ವಿಧಿಸುವ ಅಭಿಯಾನದ ಪರಿಣಾಮ ವ್ಯಾಪಾರದಲ್ಲಿ ಕಂಡುಬಂದಿದೆ.
ಪಟಾಕಿ ವ್ಯಾಪಾರದಲ್ಲಿ ಚೀನಾ ಸರಕುಗಳಿಗೆ ಕುಸಿದ ಬೇಡಿಕೆ, ದೇಶಿ ಸರಕುಗಳಿಗೆ ಡಿಮಾಂಡ್!
ಪಟಾಕಿ ವ್ಯಾಪಾರದಲ್ಲಿ ಚೀನಾ ಸರಕುಗಳಿಗೆ ಕುಸಿದ ಬೇಡಿಕೆ, ದೇಶಿ ಸರಕುಗಳಿಗೆ ಡಿಮಾಂಡ್!

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಚೀನಾ ಸರಕುಗಳಿಗೆ ನಿಷೇಧ ವಿಧಿಸುವ ಅಭಿಯಾನದ ಪರಿಣಾಮ ವ್ಯಾಪಾರದಲ್ಲಿ ಕಂಡುಬಂದಿದೆ.

ದೆಹಲಿಯಲ್ಲಿ ಎಂದಿಗಿಂತ ಹೆಚ್ಚು ದೇಶಿ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಚೀನಾ ಪಟಾಕಿಗಳನ್ನು ಖರೀದಿಸಲು ಹೆಚ್ಚಿನ ಜನರು ನಿರಾಕರಿಸುತ್ತಿದ್ದಾರೆ. ಪಟಾಕಿಗಳ ಖರೀದಿ ವಿಷಯದಲ್ಲಿ ಪಟಾಕಿಗಳ ಚೀನಾ ಮೂಲದ ಬಗ್ಗೆ ಗ್ರಾಹಕರಿಗೂ ಮಾರಾಟಗಾರರಿಗೂ ವಾಗ್ವಾದ ನಡೆದಿರುವ ಬಗ್ಗೆಯೂ ವರದಿಗಳಾಗಿದ್ದು.

ಪಟಾಕಿ ಮಾರಾಟ ಮಾಡುವವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನ್ಯಾಕೆ ಚೀನಾ ಪಟಾಕಿಗಳನ್ನು ಮಾರಾಟ ಮಾಡಲಿ? ನಾನೊಬ್ಬ ದೇಶಭಕ್ತ. ನನ್ನ ಅಂಗಡಿಯಲ್ಲಿ ಚೀನಾ ಉತ್ಪಾದಿತ ಒಂದೇ ಒಂದು ಪಟಾಕಿಯೂ ಸಿಗುವುದಿಲ್ಲ, ಆದರೆ ಇದನ್ನು ಗ್ರಾಹಕರಿಗೆ ಹೇಗೆ ನಂಬಿಸಲಿ ಎಂದು ಪ್ರಶ್ನಿಸಿದ್ದಾರೆ.

ಗ್ರಾಹಕರು ಬರುತ್ತಾರೆ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ, ಏನನ್ನು ಕೊಳ್ಳದೆ ಹಿಂತಿರುಗುತ್ತಾರೆ. ಇದು ಹಿಂದೆಂದಿಗಿಂತಲೂ ಕಡಿಮೆ ವ್ಯಾಪಾರವಾದ ದೀಪಾವಳಿ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ ಗ್ರಾಹಕರು ನಮ್ಮನ್ನು ನಂಬಬೇಕು ಎಂದು ವ್ಯಾಪಾರಿ ಅಮಿತ್ ವರ್ಮಾ ಹೇಳಿದ್ದಾರೆ. ಕಳೆದ ವರ್ಷ ಈ ವೇಳೆಗೆ ಲಕ್ಷಗಟ್ಟಲೆ ಪಟಾಕಿಗಳ ವ್ಯಾಪಾರ ನಡೆದಿದ್ದರೆ, ಈ ವರ್ಷ ಕೇವಲ ಕೆಲವೇ ಸಾವಿರದಷ್ಟು ವ್ಯಾಪಾರ ನಡೆದಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com