ಆದಾಯ ಇಳಿಕೆ; 9% ಉದ್ಯೋಗ ಕಡಿತಗೊಳಿಸಿದ ಟ್ವಿಟ್ಟರ್

ಟ್ವಿಟ್ಟರ್ ಇಂಕ್ ಸಂಸ್ಥೆಯ ಟೈಮಾಸಿಕ ಆದಾಯ ತೀವ್ರ ಇಳಿಮುಖ ಕಂಡಿದ್ದು, ಜಾಗತಿಕವಾಗಿ ಸಂಸ್ಥೆಯ 9% ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಟ್ವಿಟ್ಟರ್ ಗುರುವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕ್ಯಾಲಿಫೋರ್ನಿಯಾ: ಟ್ವಿಟ್ಟರ್ ಇಂಕ್ ಸಂಸ್ಥೆಯ ಟೈಮಾಸಿಕ ಆದಾಯ ತೀವ್ರ ಇಳಿಮುಖ ಕಂಡಿದ್ದು, ಜಾಗತಿಕವಾಗಿ ಸಂಸ್ಥೆಯ 9% ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಟ್ವಿಟ್ಟರ್ ಗುರುವಾರ ಘೋಷಿಸಿದೆ. 
ಬಳಕೆದಾರರ ಸಂಖ್ಯೆ 3% ವೃದ್ಧಿಗೊಂಡಿದ್ದು, ಈಗ ಆ ಸಂಖ್ಯೆ ಎರಡನೇ ತ್ರೈಮಾಸಿಕದ 313 ದಶಲಕ್ಷದಿಂದ ಮೂರನೇ ತ್ರೈಮಾಸಿಕಕ್ಕೆ 317 ದಶಲಕ್ಷಕ್ಕೆ ಏರಿಕೆಯಾಗಿದೆ ಎಂದು ಮೈಕ್ರೋ ಬ್ಲಾಗಿಂಗ್ ತಾಣ ತಿಳಿಸಿದೆ. 
ಇನ್ಸ್ಟಾಗ್ರಾಮ್ ಮತ್ತು ಸ್ನ್ಯಾಪ್ ಚಾಟ್ ಗಳ ಜೊತೆಗೆ ತೀವ್ರ ಪೈಪೋಟಿಯಿಂದ ಟ್ವಿಟ್ಟರ್ ಹೆಚ್ಚೆಚ್ಚು ಹೊಸ ಬಳಕೆದಾರರು ನೊಂದಣಿ ಮಾಡಿಕೊಳ್ಳುವಂತೆ ಕಾಯ್ದುಕೊಳ್ಳಲು ಹೆಣಗುತ್ತಿದೆ. 
ಆದಾಯ 8% ಹೆಚ್ಚಳಗೊಂಡಿದ್ದು ಅದು 616 ಮಿಲಿಯನ್ ಡಾಲರ್ ಎಂದು ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯನ್ನು ಮಾರಾಟ ಮಾಡಲು ಹೂಡಿಕೆದಾರರು ಕೆಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು, ಇತ್ತೀಚೆಗಷ್ಟೇ ಸೇಲ್ಸ್ ಫೋರ್ಸ್ ಸಂಸ್ಥೆ ಹಿಂದೆ ಸರಿದಿದ್ದರಿಂದ ಷೇರು ಮೌಲ್ಯ ಕುಸಿದಿತ್ತು. 
ಈ ಹಿಂದಿನ ತ್ರೈಮಾಸಿಕದಲ್ಲಿ ಆದಾಯ 20% ವೃದ್ಧಿಸಿದ್ದರೆ, ಕಳೆದ ವರ್ಷ ಆದಾಯ 58% ವೃದ್ಧಿಸಿತ್ತು. ಈ ನಿಟ್ಟಿನಲ್ಲಿ ಈ ತ್ರೈಮಾಸಿಕದ ಆದಾಯ ಇಳಿಮುಖವಾಗಿದೆ ಎಂದು ಮಾರುಕಟ್ಟೆ ಪಂಡಿತರ ಅಭಿಪ್ರಾಯ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com