ದಂತೆರಸ್: ಚಿನ್ನದ ವ್ಯಾಪಾರ ಏರಿಕೆ ನಿರೀಕ್ಷೆ, ಇಟಿಎಫ್, ಬಾಂಡ್ ಗಳ ವಹಿವಾಟು ಅವಧಿ ವಿಸ್ತರಣೆ

ಶುಕ್ರವಾರವಾದ ಇಂದು ದಂತೆರಸ್ ಹಬ್ಬ. ಹಾಗಾಗಿ ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಕುದುರುವ ನಿರೀಕ್ಷೆಯಿದೆ. ಈ ದಿನ ಹಳದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶುಕ್ರವಾರವಾದ ಇಂದು ದಂತೆರಸ್ ಹಬ್ಬ. ಹಾಗಾಗಿ ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಕುದುರುವ ನಿರೀಕ್ಷೆಯಿದೆ. ಈ ದಿನ ಹಳದಿ ಲೋಹವಾದ ಚಿನ್ನ ಖರೀದಿಸಲು ಪ್ರಶಸ್ತ ದಿನ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಚಿನ್ನದ ಮಾರಾಟ ಭರ್ಜರಿಯಿಂದ ನಡೆಯಲಿದೆ ಎನ್ನಲಾಗುತ್ತಿದೆ.
ಸಾಗರೋತ್ತರದಲ್ಲಿ ವ್ಯಾಪಾರ ನಿಷ್ಕ್ರಿಯಗೊಂಡದ್ದರಿಂದ ಎರಡು ದಿನಗಳ ನಂತರ ಚಿನ್ನದ ಬೆಲೆ ನಿನ್ನೆ 15ರಿಂದ 30 ರೂಪಾಯಿಗಳಷ್ಟು ಕಡಿಮೆಯಾಗಿದೆ. ಬೆಳ್ಳಿಯ ಬೆಲೆ ಕೂಡ ಕೆಜಿಗೆ 300 ರೂಪಾಯಿಯಷ್ಟು ಇಳಿಕೆ ಕಂಡು 42 ಸಾವಿರದ 700ರಲ್ಲಿದೆ. ಕೈಗಾರಿಕೆಗಳಲ್ಲಿ ಮತ್ತು ನಾಣ್ಯ ತಯಾರಕರು ಬೆಳ್ಳಿ ಖರೀದಿಯಲ್ಲಿ ಕುಂಠಿತ ಮಾಡಿದ್ದರಿಂದ ಬೆಳ್ಳಿಯ ಬೆಲೆಯೂ ಇಳಿಮುಖವಾಗಿದೆ.
ದಂತೆರಸ್, ದೀಪಾವಳಿ ಮತ್ತು ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಪ್ರಶಸ್ತ ಎಂದು ಭಾರತೀಯರು ಭಾವಿಸುತ್ತಾರೆ.
ಈ ಬಾರಿ ಉತ್ತಮ ಮಾನ್ಸೂನ್ ನಿಂದಾಗಿ ಆದಾಯ ಹೆಚ್ಚಿರುವುದರಿಂದ ಜನ ಸಾಮಾನ್ಯರು ಚಿನ್ನ ಖರೀದಿಸುವುದು ಹೆಚ್ಚಾಗಬಹುದು. ಹಾಗಾಗಿ ಚಿನ್ನ ಖರೀದಿ ಶೇಕಡಾ 25ರಷ್ಟು ಹೆಚ್ಚಾಗಬಹುದು ಎಂದು ಭಾರತದ ಚಿನ್ನ ಮತ್ತು ಮುತ್ತು ವ್ಯಾಪಾರಿಗಳ ಸಂಘ ನಿರೀಕ್ಷಿಸಿದೆ.
ದಂತೆರಸ್ ದಿನ ಷೇರು ವಿನಿಮಯ ಮಾರುಕಟ್ಟೆ ಗೋಲ್ಡ್ ಇಟಿಎಫ್ ಸೆಕ್ಯುರಿಟಿಸ್ ಅಂಡ್ ಸಾವಿರಿನ್ ಗೋಲ್ಡ್ ಬಾಂಡ್ ಸೆಕ್ಯುರಿಟಿಸ್ ನಲ್ಲಿ ನೇರ ವ್ಯಾಪಾರ ನಡೆಸಲು ಉದ್ದೇಶಿಸಿದೆ ಎಂದು ಮುಂಬೈ ಷೇರು ವಿನಿಮಯ ಮಾರುಕಟ್ಟೆ ತಿಳಿಸಿದೆ. ಇಂದು ಅಪರಾಹ್ನ 3.30ರವರೆಗೆ ಷೇರು ವಹಿವಾಟು ಮುಗಿದ ನಂತರ ಸಾಯಂಕಾಲ 4.30ಕ್ಕೆ ಚಿನ್ನ ಇಟಿಎಫ್ ವ್ಯಾಪಾರ, ವಹಿವಾಟು ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com