ನಿವೃತ್ತ ಜೀವನದಲ್ಲಿ ಹಣ ಹೂಡಿಕೆಗೆ ಕೆಲವು ಯೋಜನೆಗಳು

ನಿವೃತ್ತ ಜೀವನದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಬೇಕೆಂದರೆ ಗಳಿಕೆಯ ಸಮಯದಲ್ಲಿ ಸಂಪಾದಿಸಿದ್ದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚೆನ್ನೈ: ನಿವೃತ್ತ ಜೀವನದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಬೇಕೆಂದರೆ ಗಳಿಕೆಯ ಸಮಯದಲ್ಲಿ ಸಂಪಾದಿಸಿದ್ದನ್ನು ಬುದ್ದಿವಂತಿಕೆಯಿಂದ ಉಳಿಸುವುದು ಮುಖ್ಯ. ಹಾಗೆಯೇ ನಿವೃತ್ತ ಜೀವನದಲ್ಲಿ ತುಂಬಾ ಯೋಚನೆ ಮಾಡಿ ಹೂಡಿಕೆ ಮಾಡಬೇಕಾಗುತ್ತದೆ. ನಿವೃತ್ತ ಜೀವನದಲ್ಲಿ ತುಂಬಾ ವರ್ಷಗಳ ಅವಧಿಗೆ ಹೂಡಿಕೆ ಮಾಡುವಂತಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಬರುವ ಹೂಡಿಕೆ ಮೂಲಗಳು ಒಳ್ಳೆಯದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ(ಎಸ್ ಸಿಎಸ್ಎಸ್): ಹಿರಿಯ ನಾಗರಿಕರ ತುಂಬಾ ಉತ್ತಮ ಉಳಿತಾಯ ಯೋಜನೆಯಿದು. ಇದರಲ್ಲಿ ಬಡ್ಡಿ ಉತ್ತಮವಾಗಿದೆ. 60 ವರ್ಷ ಕಳೆದ ಯಾರು ಬೇಕಾದರೂ ಈ ಯೋಜನೆ ಮಾಡಿಕೊಳ್ಳಬಹುದು. ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಈ ಖಾತೆಯನ್ನು ತೆರೆಯಬಹುದು. 5 ವರ್ಷಗಳ ಅವಧಿಯದ್ದಾಗಿದ್ದು ಬೇಕೆಂದರೆ ಮತ್ತೆ ಮೂರು ವರ್ಷ ವಿಸ್ತರಿಸಿಕೊಳ್ಳಬಹುದು.
ಎಸ್ ಸಿಎಸ್ಎಸ್ ಗೆ ಪ್ರಸ್ತುತ ಶೇಕಡಾ 8.5ರಷ್ಟು ಬಡ್ಡಿದರವಿದೆ. 80 ಸಿಯಡಿ ಈ ಉಳಿತಾಯ ಖಾತೆಗೆ ತೆರಿಗೆ ವಿನಾಯ್ತಿಯಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಹಾಕುತ್ತಾರೆ. ಇದನ್ನು ಸರ್ಕಾರದ ಸೆಕ್ಯುರಿಟಿ ದರಕ್ಕೆ ಸೇರಿಸಲಾಗುತ್ತದೆ. ಇನ್ನೊಂದು ಬಹುಮುಖ್ಯ ಅಂಶವೆಂದರೆ ಒಂದು ಬಾರಿ ನೀವು ಹೂಡಿಕೆ ಮಾಡಿದ್ದೀರಿ ಎಂದರೆ ಮೆಚ್ಯೂರಿಟಿವರೆಗೆ ಬಡ್ಡಿದರವನ್ನು ನಿಗದಿಪಡಿಸುತ್ತಾರೆ. ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು ಮತ್ತು ಒಂದಕ್ಕಿಂತ ಜಾಸ್ತಿ ಖಾತೆಗಳನ್ನು ತೆರೆಯಬಹುದು. 
ಅಂಚೆ ಕಚೇರಿಯಲ್ಲಿ ತಿಂಗಳ ಆದಾಯ ಯೋಜನೆ: ಈ ಯೋಜನೆಯಡಿ ಬಡ್ಡಿದರ ಕಡಿಮೆಯಾದರೂ ಕೂಡ ಅಲ್ಪಾವಧಿಯ ಎಫ್ ಡಿಗಿಂತ ಹೆಚ್ಚು ರಿಟರ್ನ್ ಕೊಡುತ್ತದೆ. ಇದು 5 ವರ್ಷಗಳ ಯೋಜನೆಯಾಗಿದ್ದು ಪ್ರತಿ ತಿಂಗಳು ಬಡ್ಡಿ ಸಿಗುತ್ತದೆ. ಗರಿಷ್ಠ 9 ಲಕ್ಷ ಹೂಡಿಕೆ ಮಾಡಬಹುದು. ಸಿಂಗಲ್ ಉಳಿತಾಯ ಖಾತೆಯಲ್ಲಾದರೆ ನಾಲ್ಕೂವರೆ ಲಕ್ಷ ಹೂಡಿಕೆ. ಇದರಲ್ಲಿ ಬಡ್ಡಿದರ ಶೇಕಡಾ 7.7ರಷ್ಟು. ಸರ್ಕಾರದ ಭದ್ರತೆಗೆ ಇದನ್ನು ಸಂಪರ್ಕಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ನಡೆಯುತ್ತದೆ.
ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ(ಎಫ್ ಡಿ): ಹಿರಿಯ ನಾಗರಿಕರು ಎಫ್ ಡಿಯಲ್ಲಿ ಖಾತೆ ತೆರೆದರೆ ಅದಕ್ಕೆ ಒಂದು ವರ್ಷ ಅವಧಿಗೆ ಇಟ್ಟರೆ ಶೇಕಡಾ 7ರಷ್ಟು ಬಡ್ಡಿದರ, ಎರಡು, ಮೂರು, ಐದು ವರ್ಷಗಳ ಅವಧಿಗೆ ಎಫ್ ಡಿ ಇಟ್ಟರೆ ಶೇಕಡಾ 7.1, 7.3 ಮತ್ತು ಶೇಕಡಾ 7.8ರಷ್ಟು ಬಡ್ಡಿದರ ಇರುತ್ತದೆ.
ಮ್ಯೂಚ್ಯುವಲ್ ಫಂಡ್: ಮ್ಯೂಚ್ಯುವಲ್ ಫಂಡ್ ಉತ್ತಮ ಹೂಡಿಕೆಯ ವಿಧಾನವಾಗಿದೆ. ಆದರೆ ಇದರಲ್ಲಿ ಅಪಾಯ ಕೂಡ ಇದೆ. ಹಿರಿಯ ನಾಗರಿಕರು ಈಕ್ವೆಟಿ ಮ್ಯೂಚ್ಯುವಲ್ ಫಂಡ್ ಮತ್ತು ಡೆಟ್ ಮ್ಯೂಚ್ಯುವಲ್ ಫಂಡ್ ಗಳಲ್ಲಿ ಶೇಕಡಾ 25:75ರ ಅನುಪಾತದಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು.
ಹಿರಿಯ ನಾಗರಿಕರು ಒಂದೇ ಕಡೆ ಹೂಡಿಕೆ ಮಾಡಿ ಹೆಚ್ಚಿನ ಅಪಾಯ ಎದುರಿಸುವ ಬದಲು ಅಲ್ಲಲ್ಲಿ ಹೂಡಿಕೆ ಮಾಡುವುದು ಉತ್ತಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com