ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿ: 13 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ, ಆಂಧ್ರ, ತಲಗಾಂಣಕ್ಕೆ ಮೊದಲೆರಡು ಸ್ಥಾನ

ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದ್ದು, 9 ನೇ ಸ್ಥಾನದಲ್ಲಿದ್ದ ಕರ್ನಾಟಕ 13 ನೇ ಸ್ಥಾನಕ್ಕೆ ಕುಸಿದಿದೆ.
ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿ: 13 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ, ಆಂಧ್ರ, ತಲಗಾಂಣಕ್ಕೆ ಮೊದಲೆರಡು ಸ್ಥಾನ
ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿ: 13 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ, ಆಂಧ್ರ, ತಲಗಾಂಣಕ್ಕೆ ಮೊದಲೆರಡು ಸ್ಥಾನ

ನವದೆಹಲಿ: ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದ್ದು, 9 ನೇ ಸ್ಥಾನದಲ್ಲಿದ್ದ ಕರ್ನಾಟಕ 13 ನೇ ಸ್ಥಾನಕ್ಕೆ ಕುಸಿದಿದೆ.

2015 ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಕರ್ನಾಟಕ 9 ನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷ ಉದ್ಯಮ ಸ್ನೇಹಿ ಸುಧಾರಣಾ ಕಾರ್ಯರ್ಕಮಗಳ ಜಾರಿಯಲ್ಲಿ ಕುಸಿದಿದ್ದು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮೊದಲೆರಡು ಸ್ಥಾನಗಳಿಸಿದ್ದರೆ, ಗುಜರಾತ್ 3 ನೇ ಸ್ಥಾನದಲ್ಲಿದೆ. ಉಳಿದಂತೆ ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ಕ್ರಮವಾಗಿ 4 ಮತ್ತು 5 ನೇ ಸ್ಥಾನದಲ್ಲಿವೆ.

ಪಟ್ಟಿಯಲ್ಲಿರುವ ಮೊದಲ 10 ರಾಜ್ಯಗಳಲ್ಲಿ ಬಹುತೇಕ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದರೆ, ಉತ್ತರಾಖಂಡ್ ಮಾತ್ರವೇ ಕಾಂಗ್ರೆಸ್ ಆಡಳಿತದಲ್ಲಿರುವ ಏಕೈಕ ರಾಜ್ಯವಾಗಿದೆ. ಕಳೆದ ವರ್ಷ ಪ್ರಕಟವಾಗಿದ್ದ ಪಟ್ಟಿಯಲ್ಲಿ ತೆಲಂಗಾಣ -13, ಹರಿಯಾಣ-14, ಉತ್ತರಾಖಂಡ್‌-23ನೇ ಸ್ಥಾನಗಳನ್ನು ಪಡೆದುಕೊಂಡಿದ್ದವು. ಈ ಬಾರಿ ಉದ್ಯಮ ನೀತಿಯಲ್ಲಿ ಪರಿಣಾಮಕಾರಿ ಸುಧಾರಣೆಗಳನ್ನು ಜಾರಿಗೆ ತಂದಿದ್ದು ಪರಿಣಾಮವಾಗಿ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅರುಣಾಚಲಪ್ರದೇಶ, ಜಮ್ಮು-ಕಾಶ್ಮೀರ, ಚಂಡೀಗಢ, ಮೇಘಾಲಯ, ಅಂಡಮಾನ್‌-ನಿಕೋಬಾರ್‍, ಲಕ್ಷದ್ವೀಪ ಕೊನೆಯ ಅಂದರೆ 31ನೇ ಸ್ಥಾನವನ್ನು ಹಂಚಿಕೊಂಡಿವೆ. ಜುಲೈ 1, 2015ರಿಂದ ಜುಲೈ 30, 2016ರವರಗೆ ಡಿಡಿಪಿಪಿಯ 340 ಅಂಶಗಳನ್ನು ಒಳಗೊಂಡ ಉದ್ಯಮ ಸುಧಾರಣಾ ಕ್ರಿಯಾ ಯೋಜನೆಯ ಜಾರಿಯನ್ನು ಆಧರಿಸಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com