ರಿಲಾಯನ್ಸ್ ಜಿಯೋಗೆ ಸರಿಸಮನಾಗಿ ಪ್ರಬಲ ಪೈಪೋಟಿ ನೀಡುತ್ತೇವೆ: ಬಿಎಸ್ ಎನ್ ಎಲ್

ಬಿಎಸ್ಎನ್ಎಲ್ ಕರೆ ದರಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆ ರಿಲಾಯನ್ಸ್ ಜಿಯೋಗೆ ಸರಿಸಮನಾಗಿ ಪ್ರಬಲ ಪೈಪೋಟಿ ನೀಡುವುದಾಗಿ ತಿಳಿಸಿದೆ.
ಬಿಎಸ್ಎನ್ಎಲ್
ಬಿಎಸ್ಎನ್ಎಲ್

ನವದೆಹಲಿ: ರಿಲಾಯನ್ಸ್ ನ ಜಿ ಯೋ ನ ಪ್ರವೇಶ ಉಳಿದ ಮೊಬೈಲ್ ಕಂಪನಿಗಳಿಗೆ ಸವಾಲು ಎಂದಿರುವ ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್, ಕರೆ ದರಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆ ರಿಲಾಯನ್ಸ್ ಜಿಯೋಗೆ ಸರಿಸಮನಾಗಿ ಪ್ರಬಲ ಪೈಪೋಟಿ ನೀಡುವುದಾಗಿ ತಿಳಿಸಿದೆ.  

ಬಿಎಸ್ಎನ್ಎಲ್ ಸಂಸ್ಥೆ ಕರೆ ದರಗಳ ಬಗ್ಗೆ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ. ರಿಲಾಯನ್ಸ್ ಜಿಯೋಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಬಿಎಸ್ಎನ್ಎಲ್ ಗೆ ಇದೆ ಎಂದು ಹೇಳಿರುವ ಅನುಪಮ್ ಶ್ರೀವಾಸ್ತವ, ಈಗಾಗಲೇ ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹೆಚ್ಚು ಇಂಟರ್ ನೆಟ್ ಬಳಕೆ ಮಾಡುವ ಬಳಕೆದಾರರಿಗಾಗಿ ಒಂದು ರುಪಾಯಿಗೆ ಒಂದು ಜಿಬಿ ಡಾಟಾ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರಿಲಾಯನ್ಸ್ ಜಿಯೋ ಪ್ರವೇಶದಿಂದಾಗಿ ಮಾರುಕಟ್ಟೆಯಲ್ಲಿ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಜಿಯೋಗೆ ಪ್ರಬಲ ಪೈಪೋಟಿ ನೀಡದೆ ಬೇರೆ ಆಯ್ಕೆ ಇಲ್ಲ ಎಂದು ತಿಳಿಸಿದ್ದಾರೆ. ರಿಲಾಯನ್ಸ್ ಜಿಯೋ ಕರೆ, ಡಾಟಾ  ದರಗಳು ಕಡಿಮೆಯಾದಷ್ಟೂ, ಬಿಎಸ್ಎನ್ಎಲ್ ಸೇರಿದಂತೆ ಬೇರೆ ಆಪರೇಟರ್ ಗಳೂ ಕ್ರಾಂತಿಕಾರಿ ದರಗಳನ್ನು ಘೋಷಿಸಬೇಕಾಗುತ್ತದೆ ಎಂದು ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.   
ಜಿಯೋ ವಾಯ್ಸ್ ಕರೆಯನ್ನು ಸಂಪೂರ್ಣ ಉಚಿತಗೊಳಿಸಿರುವನೇ ಬಿಎಸ್ಎನ್ಎಲ್ ಸಹ ಧ್ವನಿ ಕರೆಗಳನ್ನು ಉಚಿತಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಿಎಸ್ಎನ್ಎಲ್ ಮುಖ್ಯಸ್ಥರು ಮಾರುಕಟ್ಟೆ ಮೇಲೆ ಜಿಯೋ ಘೋಷಣೆಯ ಪರಿಣಾಮವನ್ನು ಗಮನಿಸಿ ಈ ಬಗ್ಗೆ 2-3 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com