ಭಾರತ- ಪಾಕ್ ವಾಣಿಜ್ಯ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸೊಚೆಮ್‌ ಬೆಂಬಲ

ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯವಹಿವಾಟು ಕುಸಿತ ಕಂಡಿದೆ
ಭಾರತ- ಪಾಕ್ ವಾಣಿಜ್ಯ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸೊಚೆಮ್‌ ಬೆಂಬಲ
ಭಾರತ- ಪಾಕ್ ವಾಣಿಜ್ಯ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸೊಚೆಮ್‌ ಬೆಂಬಲ

ನವದೆಹಲಿ: ಉರಿ ಸೆಕ್ಟರ್ ನಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ದಾಳಿಯ ಪರಿಣಾಮ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯವಹಿವಾಟು ಕುಸಿತ ಕಂಡಿದೆ ಎಂದು ಕೈಗಾರಿಕಾ ಸಂಸ್ಥೆ ಅಸೋಷಿಯೇಟೆಡ್ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ( ಅಸೊಚೆಮ್‌ನ) ಹೇಳಿದೆ.

ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಪರಿಣಾಮ ಭಾರತ- ಪಾಕಿಸ್ತಾನ ನಡುವಿನ ವಾಣಿಜ್ಯ ವಹಿವಾಟು ಜಾಗಾತಿಕ ಮಟ್ಟದಲ್ಲಿ ಭಾರತದ ಒಟ್ಟಾರೆ ವಾಣಿಜ್ಯ ವಹಿವಾಟಿನ ಶೇಕಡ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು  ಅಸೊಚೆಮ್‌ನ ತಿಳಿಸಿದೆ.
ರಫ್ತು ಹಾಗೂ ಆಮದುಗಳನ್ನೊಳಗೊಂಡಂತೆ 2015-16 ರ ಸಾಲಿನಲ್ಲಿ ಭಾರತದ ಒಟ್ಟಾರೆ ವಾಣಿಜ್ಯ ವ್ಯಾಪಾರ 641 ಬಿಲಿಯನ್ ಡಾಲರ್ ನಷ್ಟಿತ್ತು. ಆದರೆ ಇದರಲ್ಲಿ ಅತ್ಯಲ್ಪ ಮೊತ್ತ ಅಂದರೆ 2.67 ಬಿಲಿಯನ್ ಡಾಲರ್ ನಷ್ಟು ಪಾಲನ್ನು ಮಾತ್ರ ಹೊಂದಿತ್ತು ಎಂದು ಅಸೊಚೆಮ್‌ ಪ್ರಕಟಣೆಯಲ್ಲಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಒಟ್ಟಾರೆ ವಾಣಿಜ್ಯ ವಹಿವಾಟಿನಲ್ಲಿ ಪಾಕಿಸ್ತಾನದೊಂದಿಗಿನ ವಹಿವಾಟು ಇರುವುದು ಶೇ.0.41 ರಷ್ಟು ಮಾತ್ರ ಎಂದು  ಅಸೊಚೆಮ್‌ನ ಪ್ರಧಾನ ಕಾರ್ಯದರ್ಶಿ ಡಿಎಸ್ ರಾವತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ವ್ಯಾಪಾರ ವಹಿವಾಟಿನಲ್ಲಿ ಭಾರತ ಪಾಕಿಸ್ತಾನಕ್ಕೆ ಅತ್ಯಂತ ನೆಚ್ಚಿನ ರಾಷ್ಟ್ರ (ಮೋಸ್ಟ್ ಫೇವರ್ಡ್ ನೇಷನ್ ಎಂಎಫ್ಎನ್)ದ ಸ್ಥಾನ ನೀಡಿರುವುದರ ಹೊರತಾಗಿಯೂ ದ್ವಿಪಕ್ಷೀಯ ವಾಣಿಜ್ಯ ವಹಿವಾಟುಗಳಲ್ಲಿ ಗಮನಾರ್ಹ ವ್ಯತ್ಯಾಸವೇನೂ ಆಗಿಲ್ಲ ಎಂದಿದ್ದಾರೆ ಡಿಎಸ್ ರಾವತ್. ಭಾರತ ನೀಡಿರುವ ಎಂಎಫ್ಎನ್ ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿಲ್ಲ, ಎಂಎಫ್ಎನ್ ಸ್ಥಾನದ ಹೊರತಾಗಿಯೂ ಭಾರತಕ್ಕೆ ಪಾಕಿಸ್ತಾನದ ರಫ್ತು ಅರ್ಧ ಮಿಲಿಯನ್ ಡಾಲರ್ ಗಿಂತಲೂ ಕಡಿಮೆ ಇದೆ ಎಂದು ರಾವತ್ ಹೇಳಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಭಾರತ-ಪಾಕಿಸ್ತಾನದ ನಡುವೆ ಪರಸ್ಪರ ವಾಣಿಜ್ಯ ಆಸಕ್ತಿಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಅಸೊಚೆಮ್‌ ಹೇಳಿದ್ದು, ಭಾರತ- ಪಕ್ ನಡುವಿನ ವಾಣಿಜ್ಯ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಳ್ಳುವ ನಿರ್ಧಾರಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಇಂಡಿಯಾ ಇನ್‌ಕಾರ್ಪೊರೇಟೆಡ್ ( ಇಂಡಿಯಾ ಇಂಕ್) ಬೆಂಬಲಿಸುತ್ತದೆ ಎಂದು ಅಸೊಚೆಮ್‌ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com