ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ
ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ

ಇಂದು ಅಂತರಿಕ್ಷಯಾನ ಕ್ಷೇತ್ರ ಬೇಡಿಕೆಯಲ್ಲಿದೆ: ಆರ್.ವಿ. ದೇಶಪಾಂಡೆ

ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಇಲಾಖೆ ಸಚಿವರಾಗಿ...
ಬೆಂಗಳೂರು: ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ  ಮೂಲಭೂತ ಸೌಕರ್ಯ ಇಲಾಖೆ ಸಚಿವರಾಗಿ ಆರ್.ವಿ.ದೇಶಪಾಂಡೆ ಕರ್ನಾಟಕದಲ್ಲಿ ಹೂಡಿಕೆ ಕ್ಷೇತ್ರದಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ಅವರು ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ.
1.ಹಿರಿಯ ನೀತಿ ನಿರೂಪಕರಾಗಿ ನೀವು ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ? 
-1997ರ ಹೊತ್ತಿಗೆ ಕರ್ನಾಟಕದಲ್ಲಿ ಪ್ರಕಾಶಮಾನವಾದ ಉದ್ಯಮವೆಂದರೆ ಮಾಹಿತಿ ತಂತ್ರಜ್ಞಾನ. ಇಂದು ಬಹಳ ಬೇಡಿಕೆಯಿರುವ ಉದ್ಯಮ ಕ್ಷೇತ್ರ  ಅಂತರಿಕ್ಷಯಾನ. ಭಾರತ ಸರ್ಕಾರ ರಕ್ಷಣಾ ಆದೇಶಗಳನ್ನು ಹೊರಡಿಸುವುದನ್ನು ನಾವು ನಿರೀಕ್ಷಿಸುತ್ತೇವೆ. ಅಂತರಿಕ್ಷಯಾನ ಕರ್ನಾಟಕ ರಾಜ್ಯದ ಶಕ್ತಿಯೂ ಹೌದು. ದೇವನಹಳ್ಳಿ ಸಮೀಪ 3,000 ಎಕರೆ ಪಾರ್ಕ್ ಇದ್ದು ಅಲ್ಲಿ ಅಂತರಿಕ್ಷಯಾನ ಮತ್ತು ಹಾರ್ಡ್ ವೇರ್ ಕೈಗಾರಿಕೆಗಳು ಬರಲಿವೆ. ಎಂಆರ್ಒ ಸೌಕರ್ಯ ಮತ್ತು ಘಟಕ ತಯಾರಿಕಾ ಕಾರ್ಖಾನೆಗಳು ಕೂಡ ಇರಲಿವೆ. ಹೆಲಿಕಾಪ್ಟರ್ ಗಳನ್ನು ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ ಉತ್ಪತ್ತಿ ಮಾಡಲಾಗುತ್ತದೆ.
ಸ್ವಯಂಚಾಲನ ಯಂತ್ರ ಮತ್ತು ರೊಬೊಟ್ ಗಳು ಬರುವುದರಿಂದ ಅನೇಕರು ಉದ್ಯೋಗ ಕಳೆದುಕೊಳ್ಳಲಿದ್ದು ಅವು ಗಳನ್ನು ಭರಿಸಲು ಸಾಧ್ಯವಿಲ್ಲ. ರೊಬೊಟ್ ಗಳು ಮಾನವನ ಬದಲಿಗೆ ಕೆಲಸ ಮಾಡುವುದರಿಂದ ಅವುಗಳಿಗೂ ತೆರಿಗೆ ಹೇರಬೇಕೆಂಬ ಬಿಲ್ ಗೇಟ್ಸ್ ಅವರ ಮಾತನ್ನು ನಾನು ಒಪ್ಪುತ್ತೇನೆ. 2025ರ ಹೊತ್ತಿಗೆ ಭಾರತ ಯುವ ಜನಾಂಗದ ರಾಷ್ಟ್ರವಾಗಲಿದೆ. ಹೀಗಾಗಿ ನಾವು ಆಟಿಕೆಗಳು ಮತ್ತು ಮೊಬೈಲ್ ತಯಾರಿಕೆಗಳಂತಹ ಶ್ರಮವಿಲ್ಲದೆ ಕೈಗಾರಿಕೆಗಳನ್ನು ಸೃಷ್ಟಿಮಾಡಬೇಕಾಗಿದೆ.
ಕಳೆದ ವರ್ಷಕ್ಕಿಂತ 2017ರ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ?
-ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 3 ಲಕ್ಷ ಕೋಟಿ ಹೂಡಿಕೆ ಬಂದಿದೆ. ಅವುಗಳಲ್ಲಿ 1 ಲಕ್ಷದ 70,000 ಕೋಟಿಗೆ ಅನುಮತಿ ಸಿಕ್ಕಿ ಒಪ್ಪಿಗೆ ನೀಡಲಾಗಿದೆ. ಹೆಚ್ಚಿನ ನಿಲುವಳಿ ಒಪ್ಪಂದಗಳನ್ನು ಜಾರಿಗೊಳಿಸಲಾಗಿದೆ. ಆದರೆ ಉತ್ಪಾದಕ ವಲಯದಲ್ಲಿನ ಹೂಡಿಕೆ ನಿಧಾನವಾಗಿದೆ ಎಂಬುದು ನನ್ನ ಭಾವನೆ ಇದಕ್ಕೆ ಕಾರಣ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ಕುಂಠಿತವಾಗಿರುವುದು. ಇತ್ತೀಚೆಗೆ ಉದ್ಯೋಗ ಸೃಷ್ಟಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಋಣಾತ್ಮಕ ಬೆಳವಣಿಗೆಗಳಾಗುತ್ತಿವೆ. ಕರ್ನಾಟಕದಲ್ಲಿ ಸ್ವಲ್ಪ ಬದಲಾವಣೆಯಿದೆ. ಆದರೆ ಇದರಿಂದ ನನಗೆ ಖುಷಿಯೇನಿಲ್ಲ.
ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆ ಏರುಪೇರಾಗಿದ್ದು, ಬೆಂಗಳೂರನ್ನು ಕೇಂದ್ರೀಕೃತವಾಗಿದೆ ಎಂಬ ಆರೋಪವಿದೆಯಲ್ಲವೇ?
-ಬೆಂಗಳೂರು ನಗರದ ಮಾಲಿನ್ಯ ಮತ್ತು ಪರಿಸರದ ಬಗ್ಗೆ ನಮಗೆ ಸಹ ಆತಂಕವಿದ್ದು ಉತ್ಪಾದನಾ ಘಟಕಗಳು ಇಲ್ಲಿಗೆ ಬಾರದಂತೆ ಪ್ರಯತ್ನಿಸುತ್ತಿದ್ದೇವೆ. ಉತ್ಪಾದನಾ ಘಟಕಗಳನ್ನು ಮಂಗಳೂರು, ಕೋಲಾರ, ವೇಮಗಲ್, ನರಸಾಪುರ, ವಸಂತನರಸಾಪುರ ಮತ್ತು ಯಾದಗಿರಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಬೆಂಗಳೂರಿನಲ್ಲಿ ಹೂಡಿಕೆ ಕೂಡ ಸುಲಭವಾಗಿಲ್ಲ. ಗ್ಲಾಕ್ಸೊಸ್ಮಿತ್ ಕ್ಲಿನ್ಸ್  ದೊಡ್ಡ ಹೂಡಿಕೆ ವೇಮಗಲ್ ನಲ್ಲಿ ಆಗುತ್ತಿದೆ. ಹೊಂಡಾ ನರಸಾಪುರದಲ್ಲಿ, ಕೋಲಾರ ಜಿಲ್ಲೆಗಳಲ್ಲಿ ಘಟಕ ತೆರೆಯುತ್ತಿದೆ. ಏಷಿಯನ್ ಪೈಂಟ್ಸ್ ಅಂಡ್ ಪೆಪ್ಸಿ ಮೈಸೂರಿಗೆ ಹೋಗಿವೆ. ಹಾವೆಲ್ಸ್ ತುಮಕೂರಿಗೆ ಹೋಗಿದೆ.
ಭೂ ಸ್ವಾಧೀನ ಶಾಸನ ಕಠಿಣವಾಗಿದೆ. ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಭೂಮಿ ಸಂಗ್ರಹಿಸುವುದು ಎಷ್ಟು ಕಷ್ಟ?
- ಈಗಿನ ಕಾನೂನು ತುಂಬಾ ಕಠಿಣವಾಗಿದೆ. ಆದರೆ ಕೈಗಾರಿಕೋದ್ಯಮಿಗಳಿಗೆ ಭೂಮಿ ಖರೀದಿಸುವ ಸಾಮರ್ಥ್ಯವಿದೆ. ಭೂಮಿ ಖರೀದಿಗೆ ಯಾವ ಕೈಗಾರಿಕೆಗಳು ಹೆಚ್ಚಿನ ಹಣ ಹೂಡುವುದಿಲ್ಲ. ಹೂಡಿಕೆದಾರರು ಕೈಗಾರಿಕೆಗಳಲ್ಲಿ, ಸಂಶೋಧನೆ, ಅಭಿವೃದ್ಧಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಹೂಡಿಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ನೋಡುತ್ತಿದ್ದೇವೆ. ಎರಡನೆಯದಾಗಿ ಬೇಡಿಕೆ ಸಮೀಕ್ಷೆ ನಡೆಸಬೇಕು. ಆ ಪ್ರದೇಶದಲ್ಲಿ ಹೂಡಿಕೆಗೆ ಬೇಡಿಕೆಯಿದ್ದರೆ ಮಾತ್ರ ನಾವು ಜಮೀನು ಖರೀದಿಸುತ್ತೇವೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಮೀನು ಖರೀದಿಸುತ್ತೇವೆ. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುತ್ತೇವೆ. ಕೈಗಾರಿಕೋದ್ಯಮದಲ್ಲಿ ಕೆಲಸ ಸಿಗಲು ಪ್ರತಿ ಕುಟುಂಬದ ಮಕ್ಕಳಿಗೆ ಕುಶಲ ತರಬೇತಿ ನೀಡಬೇಕು. 
ಕೆಲವು ರಾಜ್ಯಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಉಚಿತ ಭೂಮಿ ನೀಡುವಿಕೆ, 10 ವರ್ಷಗಳವರೆಗೆ ವ್ಯಾಟ್ ನಲ್ಲಿ ವಿನಾಯ್ತಿ ಇತ್ಯಾದಿಗಳನ್ನು ನೀಡುತ್ತಾರೆ. ವಿನಾಯ್ತಿಯೊಂದರಿಂದಲೇ ಯಶಸ್ಸು ಸಾಧ್ಯವಿಲ್ಲ. ಮೂಲಭೂತ ಸೌಕರ್ಯ ಕೂಡ ಚೆನ್ನಾಗಿರಬೇಕು. ನಿಮ್ಮಲ್ಲಿ ವಿದ್ಯುತ್, ನೀರು, ಮಾರುಕಟ್ಟೆ ಮತ್ತು ಮಾನವ ಸಂಪನ್ಮೂಲವಿಲ್ಲದಿದ್ದರೆ ಭೂಮಿ ಇದ್ದರೆ ಏನು ಪ್ರಯೋಜನ? ನನಗೆ ಆ ಸ್ಪರ್ಧೆಯಲ್ಲಿ ನಂಬಿಕೆ ಇಲ್ಲ.
ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ನೀತಿಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಬೇಕು ಅನಿಸುತ್ತದೆಯೇ?
-ಕರ್ನಾಟಕ ಸರ್ಕಾರ ಮೊದಲ ಬಾರಿಗೆ ಐಟಿ ನೀತಿ ಮತ್ತು ಐಟಿ ಇಲಾಖೆಯನ್ನು 1997ರಲ್ಲಿ ತಂದಿದ್ದು, ಆಗ ಮಾಹಿತಿ ತಂತ್ರಜ್ಞಾನದ ರಫ್ತು 500 ಕೋಟಿಗಿಂತ ಕಡಿಮೆಯಿದ್ದಿತು. ಉದ್ಯೋಗದ ಪ್ರಮಾಣ 4,000ದಿಂದ 5,000 ಕೋಟಿಯಷ್ಟಿತ್ತು. ಇಂದು ಲಕ್ಷಾಂತರ ಮಂದಿ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ, ಕಂಪೆನಿಗಳು ತಮ್ಮ ಹೊರನೋಟವನ್ನು ಬದಲಾಯಿಸಿಕೊಳ್ಳಬೇಕಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com