ಐಎಂಎಫ್
ವಾಣಿಜ್ಯ
ಇತ್ತೀಚಿನ ವರ್ಷಗಳಲ್ಲಿ ಭಾರತ ಉತ್ತಮ ಬೆಳವಣಿಗೆ ದಾಖಲಿಸಿದೆ: ಐಎಂಎಫ್
ಇತ್ತೀಚಿನ ವರ್ಷಗಳಲ್ಲಿ ಭಾರತ ಅತ್ಯುತ್ತಮ ಆರ್ಥಿಕ ಬೆಳವಣಿ ದಾಖಲಿಸಿದ್ದು, ಸರ್ಕಾರದಿಂದ ತೆರಿಗೆ ವಿನಾಯಿತಿಯ ಮಿತಿ ವಿಸ್ತರಣೆಗೆ ಹೆಚ್ಚು ಅವಕಾಶ ಕಲ್ಪಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ವಾಷಿಂಗ್ ಟನ್: ಇತ್ತೀಚಿನ ವರ್ಷಗಳಲ್ಲಿ ಭಾರತ ಅತ್ಯುತ್ತಮ ಆರ್ಥಿಕ ಬೆಳವಣಿ ದಾಖಲಿಸಿದ್ದು, ಸರ್ಕಾರದಿಂದ ತೆರಿಗೆ ವಿನಾಯಿತಿಯ ಮಿತಿ ವಿಸ್ತರಣೆಗೆ ಹೆಚ್ಚು ಅವಕಾಶ ಕಲ್ಪಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಭಾರತ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಇಂಧನ ಸಬ್ಸಿಡಿಗಳನ್ನು ಬಿಟ್ಟುಕೊಡಲು ಸಾಧ್ಯವಿರುವವರಿಗೆ ಸಬ್ಸಿಡಿಗಳನ್ನು ನಿಲ್ಲಿಸಿ ಅದನ್ನು ಸಾಮಾಜಿಕ ಉಪಯೋಗಕ್ಕೆ ಬಳಕೆ ಮಾಡಿರುವುದು ಸೇರಿದಂತೆ ಭಾರತ ಸರ್ಕಾರದ ಅನೇಕ ಕ್ರಮಗಳು ಬಜೆಟ್ ನಲ್ಲಿ ಗುರಿ ಹೊಂದಲಾಗಿದ್ದ ಶೇ.3.5 ರಷ್ಟು ಜಿಡಿಪಿಯನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಐಎಂಎಫ್ ನ ಹಣಕಾಸು ವ್ಯವಹಾರಗಳ ಇಲಾಖೆಯ ನಿರ್ದೇಶಕ ವಿಕ್ಟರ್ ಗಾಸ್ಪರ್ ಹೇಳಿದ್ದಾರೆ.
ವೆಚ್ಚಗಳನ್ನು ಕ್ರಮಬದ್ಧಗೊಳಿಸುವಿಕೆ ಸೇರಿದಂತೆ ಹಣಕಾಸು ಇಲಾಖೆಗೆ ಸಂಬಂಧಿಸಿದ ರಚನಾತ್ಮಕ ಕ್ರಮಗಳ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಒಗ್ಗೂಡಿ ಕೆಲಸ ಮಾಡಲಿದ್ದೇವೆ. ದೇಶಾದ್ಯಂತ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಇರುವುದು ಪ್ರಮುಖವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಎಸ್ ಟಿ ಜಾರಿ ಮಹತ್ವ ಪಡೆದುಕೊಂಡಿದೆ. ಪರಿಣಾಮವಾಗಿ ತೆರಿಗೆ ವಿನಾಯಿತಿ ಮಿತಿಯನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಅವಕಾಶ ಇರಲಿದೆ ಎಂದು ಐಎಂಎಫ್ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ