ಫ್ಲಾಟು, ಕಾರು ಆಯ್ತು ಈಗ ಸೂರತ್ ಉದ್ಯಮಿಯಿಂದ ಉದ್ಯೋಗಿಗಳಿಗೆ ದ್ವಿ ಚಕ್ರ ವಾಹನ ಗಿಫ್ಟ್!

ಸಂಸ್ಥೆಯ ಉದ್ಯೋಗಿಗಳಿಗೆ ಫ್ಲಾಟ್ ಗಳು ಮತ್ತು ಕಾರುಗಳನ್ನು ನೀಡಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಸೂರತ್ ನ ವಜ್ರದ ವ್ಯಾಪಾರಿ ಸಾವ್ಜೀ ಧೋಲ್ಖಿಯಾ ಬಳಿಕ ಇದೀಗ ಮತ್ತೋರ್ವ ವ್ಯಾಪಾರಿ ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಉದ್ಯೋಗಿಗಳಿಗೆ ನೀಡಿದ ದ್ವಿಚಕ್ರವಾಹನ
ಉದ್ಯೋಗಿಗಳಿಗೆ ನೀಡಿದ ದ್ವಿಚಕ್ರವಾಹನ

ಸೂರತ್: ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಫ್ಲಾಟ್ ಗಳು ಮತ್ತು ಕಾರುಗಳನ್ನು ನೀಡಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಸೂರತ್ ನ ವಜ್ರದ ವ್ಯಾಪಾರಿ ಸಾವ್ಜೀ ಧೋಲ್ಖಿಯಾ ಬಳಿಕ ಇದೀಗ ಮತ್ತೋರ್ವ ವ್ಯಾಪಾರಿ  ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಇತ್ತ ಬೆಂಗಳೂರು ಮೂಲದ ವಿಪ್ರೋ ಸಂಸ್ಥೆ ನಿರೀಕ್ಷೆ ಮುಟ್ಟದ 600 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಿದ್ದರೆ, ಅತ್ತ ಸೂರತ್ ನಲ್ಲಿ ಖ್ಯಾತ ವಜ್ರದ ವ್ಯಾಪಾರಿ ಲಕ್ಷ್ಮೀಕಾಂತ್ ವಿಕಾರಿಯಾ ತಮ್ಮ 150  ಉದ್ಯೋಗಿಗಳಿಗೆ ದ್ವಿಚಕ್ರವಾಹನಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಉದ್ಯೋಗಿಗಳ ವೇತನ ಭತ್ಯೆಯಾಗಿ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಸೂರತ್ ನಲ್ಲಿ ಭಾರಿ ಕಾರ್ಯಕ್ರಮವನ್ನೇ ಆಯೋಜಿಸಿದ್ದ ವಿಕಾರಿಯಾ, ಉಡುಗೊರೆಗಳನ್ನು ತಮ್ಮ ಕೈಯಾರೆ ಉದ್ಯೋಗಿಗಳಿಗೆ ನೀಡಿದರು. ಸಂಸ್ಥೆಯ ಅಂಗಳದಲ್ಲಿ ನಿಂತಿದ್ದ ಪ್ರತೀ ದ್ವಿಚಕ್ರವಾಹನದ ಮೇಲೂ ತ್ರಿವರ್ಣ  ಧ್ವಜವನ್ನು ಹಾಕುವ ಮೂಲಕ ದೇಶಕ್ಕೆ ಗೌರವ ಸೂಚಿಸಲಾಗಿತ್ತು.

ಕಳೆದ ವರ್ಷ ಇದೇ ಸೂರತ್ ನಲ್ಲಿ ವಜ್ರದ ವ್ಯಾಪಾರಿ ಸಾವ್ಜಿ ದೋಲ್ಖಿಯಾ 400 ಫ್ಲಾಟ್ ಗಳು ಮತ್ತು ಸುಮಾರು 1, 260 ಕಾರುಗಳನ್ನು ಉದ್ಯೋಗಿಗಳಿಗೆ ಗಿಫ್ಟ್ ಆಗಿ ನೀಡುವ ಮೂಲಕ ಗಮನ ಸೆಳೆದಿದ್ದರು.

ಉದ್ಯೋಗಿಗಳಿಗೆ ಬಿಎಸ್ 3 ವಾಹನಗಳು ನೀಡಿದ ಉದ್ಯಮಿ?
ಇನ್ನು ಮತ್ತೊಂದು ವಾದಗಳ ಪ್ರಕಾರ ಈ ಹಿಂದೆ ಕೇಂದ್ರ ಸಾರಿಗೆ ಇಲಾಖೆಯ ನಿಯಮಾವಳಿಗಳ ಅನ್ವಯ ಭಾರತ್ ಸ್ಟೇಜ್ 3 (ಬಿಎಸ್ 3) ವಾಹನಗಳನ್ನು ನಿಷೇಧ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಧ್ವಿಚಕ್ರವಾಹನ ಮಾರಾಟ  ಸಂಸ್ಥೆಗಳು ಅತ್ಯಂತ ಕಡಿಮೆ ದರದಲ್ಲಿ ವಾಹನಗಳನ್ನು ಮಾರಾಟ ಮಾಡಿದ್ದವು. ಪ್ರಸ್ತುತ ಉದ್ಯಮಿ ಲಕ್ಷ್ಮೀಕಾಂತ್ ವಿಕಾರಿಯಾ ಅವರು ಕೂಡ ತಮ್ಮ ಉದ್ಯೋಗಿಗಳಿಗೆ ಬಿಎಸ್ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ  ವಾದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಬಿಎಸ್ 3 ವಾಹನಗಳನ್ನು ಕಡಿಮೆ ಬೆಲೆಗೆ ಕೊಂಡು ಅದನ್ನು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಕಾರಿಯಾ  ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com