ಜಿಎಸ್ ಟಿ ಜಾರಿ ನಂತರ ಸಣ್ಣ-ಮಧ್ಯಮ ಗಾತ್ರದ ಕಾರುಗಳ ಬೆಲೆ ಏರಿಕೆ

ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಲಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಎಸ್ ಟಿ ಜಾರಿ ನಂತರ ಸಣ್ಣ-ಮಧ್ಯಮ ಗಾತ್ರದ ಕಾರುಗಳ ಬೆಲೆ ಏರಿಕೆ
ಜಿಎಸ್ ಟಿ ಜಾರಿ ನಂತರ ಸಣ್ಣ-ಮಧ್ಯಮ ಗಾತ್ರದ ಕಾರುಗಳ ಬೆಲೆ ಏರಿಕೆ
ನವದೆಹಲಿ: ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಲಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಜಿಎಸ್ ಟಿ ಕನಿಷ್ಠ 10 ಕೇಂದ್ರ ಹಾಗೂ ರಾಜ್ಯಗಳ ತೆರಿಗೆಗಳನ್ನು ಒಗ್ಗೂಡಿಸಲಿದ್ದು, ಶೇ.5, ಶೇ.12, ಶೇ.18 ಹಾಗೂ ಶೇ.28 ರಷ್ಟು ವಿಭಾಗಗಳ ತೆರಿಗೆ ಪೈಕಿ ಒಂದರಲ್ಲಿ ಜಿಎಸ್ ಟಿ ಸಹ ಜಾರಿಯಾಗಬೇಕಾಗಲಿದ್ದು ಈಗಿನ ತೆರಿಗೆ ವ್ಯಾಪ್ತಿಗೆ ತೆರಿಗೆ ವ್ಯಾಪ್ತಿಯ ದರಕ್ಕೆ ಸರಿಹೊಂದುವಂತೆ ಜಾರಿಗೆ ತರಲಾಗುತ್ತದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕಾರುಗಳಿಗೆ ಶೇ.12.5 ರಷ್ಟು ಕೇಂದ್ರ ಅಬಕಾರಿ ತೆರಿಗೆ ಇದ್ದರೆ, ರಾಜ್ಯ ಸರ್ಕಾರಗಳಿಂದ ಶೇ.14.5-15 ರಷ್ಟು ವ್ಯಾಟ್ ವಿಧಿಸಲಾಗುತ್ತಿದ್ದು ಒಟ್ಟಾರೆ ಶೇ.27-27.5 ರಷ್ಟು ತೆರಿಗೆ ಇದೆ. 
ಜಿಎಸ್ ಟಿ ಜಾರಿ ಕುರಿತು ಹಣಕಾಸು ಇಲಾಖೆಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಈ ವಿಭಾಗಕ್ಕೆ ಅತ್ಯಂತ ಹತ್ತಿರವಾದದ್ದು ಶೇ.28 ರಷ್ಟು ತೆರಿಗೆ ವಿಭಾಗವಾಗಿದೆ. ಜಿಎಸ್ ಟಿ ಜಾರಿಯಾದರೆ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ.28 ರಷ್ಟು ತೆರಿಗೆ ವಿಭಾಗಗಳ ಪೈಕಿ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಹಾಗು ಮಧ್ಯಮ ಕಾರುಗಳ ಬೆಲೆಯೂ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕಾರುಗಳ ದರ ಸ್ವಲ್ಪ ಏರಿಕೆಯಾದರೆ ಇನ್ನೂ ಕೆಲವು ಕಾರುಗಳ ದರದಲ್ಲಿ ಇಳಿಕೆಯಾಗಲಿದೆ, ಆದರೆ ಅವುಗಳನ್ನು ಉತ್ಪಾದಕರು ಗ್ರಾಹಕರಿಗೆ ತಲುಪಿಸಬೇಕಷ್ಟೇ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com