ವಿಪ್ರೋ ಸಿಎಂಡಿ ಸ್ಥಾನಕ್ಕೆ ಅಜೀಮ್ ಪ್ರೇಮ್ ಜಿ ಪುನರಾಯ್ಕೆ

ವಿಪ್ರೋ ಆಡಳಿತ ಮಂಡಳಿ ಅಜೀಮ್ ಪ್ರೇಮ್ ಜಿ ಅವರನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಪುನರಾಯ್ಕೆ ಮಾಡಿದ್ದು, ಜು.31 ರಿಂದ 2 ವರ್ಷಗಳು ಅಜೀಮ್ ಪ್ರೇಮ್ ಜಿ ಹುದ್ದೆಯಲ್ಲಿ...
ಅಜೀಮ್ ಪ್ರೇಮ್ ಜಿ
ಅಜೀಮ್ ಪ್ರೇಮ್ ಜಿ
ಬೆಂಗಳೂರು: ವಿಪ್ರೋ ಆಡಳಿತ ಮಂಡಳಿ ಅಜೀಮ್ ಪ್ರೇಮ್ ಜಿ ಅವರನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಪುನರಾಯ್ಕೆ ಮಾಡಿದ್ದು, ಜು.31 ರಿಂದ 2 ವರ್ಷಗಳು ಅಜೀಮ್ ಪ್ರೇಮ್ ಜಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. 
1960 ರಿಂದ ಸಂಸ್ಥೆಯ ಉನ್ನತ ಸ್ಥಾನದಲ್ಲಿರುವ ಅಜೀಮ್ ಪ್ರೇಮ್ ಜಿ ಅವರು ಸಂಸ್ಥೆಯನ್ನು ಭಾರತೀಯ ಐಟಿ ಪವರ್ ಹೌಸ್ ನ್ನಾಗಿಸಿ $8 ಬಿಲಿಯನ್ ಆದಾಯ ಗಳಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಜೀಮ್ ಪ್ರೇಮ್ ಜಿ ಅವರ ಪುತ್ರ ರಿಷದ್ ಪ್ರೇಮ್ ಜಿ ವಿಪ್ರೋ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿದ್ದು, ಶೀಘ್ರವೇ ಉನ್ನತ ಜವಾಬ್ದಾರಿಯನ್ನು ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ. 
ಅಜೀಮ್ ಪ್ರೇಮ್ ಜಿ ಅವರನ್ನು ಪುನರಾಯ್ಕೆ ಮಾಡಿರುವುದಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉದ್ಯಮ ವಿಶ್ಲೇಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, ಈ ವರೆಗೂ ಅಜೀಮ್ ಪ್ರೇಮ್ ಜಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಸಂಸ್ಥೆಗಳೂ ಬದಲಾಗಬೇಕಿರುವುದು ವಿಪ್ರೋ ಹಾಗೂ ಭಾರತೀಯ ಐಟಿ ಉದ್ಯಮಕ್ಕೆ ಇರುವ ಪ್ರಮುಖ ಸವಾಲುಗಳಾಗಿವೆ. ಅಜೀಮ್ ಪ್ರೇಮ್ ಜಿ ಅಥವಾ ಇನ್ನು ಯಾವುದೇ ಐಟಿ ಸಂಸ್ಥೆಗಳೂ ಬದಲಾವಣೆಯ ಪರಿಮಾಣವನ್ನು ತಮ್ಮ ಸಂಸ್ಥೆಗಳನ್ನು ಬದಲಾವಣೆಗೆ ಒಗ್ಗಿಕೊಳ್ಳುವಂತೆ ಮಾಡಲು ಅಗತ್ಯವಿರುವುದನ್ನು ಮಾಡುತ್ತಿಲ್ಲ. ಅಜೀಮ್ ಪ್ರೇಮ್ ಜಿ ಅವರ ಸಾಮರ್ಥ್ಯದಲ್ಲಿ ನಂಬಿಕೆ ಇದೆಯಾದರೂ ವಿಪ್ರೋ ದೀರ್ಘಾವಧಿಯ ಭವಿಷ್ಯದ ಬಗ್ಗೆ ಆತಂಕವಿದೆ ಎಂದು ಸಿಲಿಕಾನ್ ವ್ಯಾಲಿಯ ಕಾರ್ನೆಗೀ ಮೆಲ್ಲನ್ ಯೂನಿವರ್ಸಿಟಿ ಇಂಜಿನಿಯರಿಂಗ್ ನ ಸದಸ್ಯ ವಿವೇಕ್ ವಾಧ್ವ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com