ಷೇರು, ಮ್ಯೂಚುವಲ್ ಫಂಡ್ ಖರೀದಿಸಲು ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ: ಸರ್ಕಾರದಿಂದ ನಿಯಮ ಜಾರಿ ಸಾಧ್ಯತೆ

ಷೇರು ಮಾರುಕಟ್ಟೆಯಲ್ಲಿ ಹಣಕಾಸು ವಹಿವಾಟು ನಡೆಸಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:ಷೇರು ಮಾರುಕಟ್ಟೆಯಲ್ಲಿ ಹಣಕಾಸು ವಹಿವಾಟು ನಡೆಸಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಕೇಂದ್ರ ಸರ್ಕಾರ ಮತ್ತು ಷೇರು ಮಾರುಕಟ್ಟೆ ಪ್ರಾಧಿಕಾರ ಸೆಬಿ ಚಿಂತನೆ ನಡೆಸಿವೆ.
ಇನ್ನು ಮುಂದೆ ಸಾರ್ವಜನಿಕರು ಷೇರು ಮತ್ತು ಮ್ಯೂಚುವಲ್ ಫಂಡ್ ಗಳನ್ನು ಖರೀದಿಸಲು ಆಧಾರ್ ಸಂಖ್ಯೆಯ ವಿವರಗಳನ್ನು ನೀಡುವಂತೆ ಸರ್ಕಾರ ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಷೇರು ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಕಪ್ಪು ಹಣ ಹೂಡಿಕೆ ಮಾಡುವುದನ್ನು ತಡೆಗಟ್ಟಿ ಪಾರದರ್ಶಕತೆ ತರಲು ಈ ಕ್ರಮವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಅಕ್ರಮ ಹಣ ವಹಿವಾಟನ್ನು ತಡೆಯಲು ಪ್ಯಾನ್ ಸಂಖ್ಯೆ ಮಾತ್ರ ಸಾಕಾಗುವುದಿಲ್ಲ. ಹೀಗಾಗಿ ಆಧಾರ್ ಸಂಖ್ಯೆಯನ್ನು ಕೂಡ ಜೋಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ.
ತೆರಿಗೆ ಪಾವತಿದಾರರು ಪ್ಯಾನ್ ಸಂಖ್ಯೆಯ ಜೊತೆಗೆ ಆಧಾರ್ ಸಂಖ್ಯೆಯನ್ನು ಕೂಡ ಜೋಡಿಸಬೇಕೆಂದು ಈ ವರ್ಷ ಜುಲೈ 1ರಿಂದ ಕೇಂದ್ರ ಸರ್ಕಾರ ಕಡ್ಡಾಯ ಮಾಡಿತ್ತು.
ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ 12 ಅಂಕೆಗಳ ಆಧಾರ್ ನ್ನು ಪ್ಯಾನ್ ಸಂಖ್ಯೆ ಪಡೆದುಕೊಳ್ಳಲು ಅರ್ಜಿ ಹಾಕುವ ಸಂದರ್ಭದಲ್ಲಿ ನೀಡಬೇಕೆಂದು ಕೂಡ ಕಡ್ಡಾಯ ಮಾಡಿದೆ. 
ಪ್ರಸ್ತುತ ದೇಶದಲ್ಲಿ 25 ಕೋಟಿಗೂ ಅಧಿಕ ಪ್ಯಾನ್ ಸಂಖ್ಯೆಯನ್ನು ಹೊಂದಿರುವವರು ಇದ್ದು, 111 ಕೋಟಿ ಜನತೆಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com