5 ತಿಂಗಳ ಬಳಿಕ ಚೇತರಿಕೆ ಕಂಡ ಭಾರತದ ಸಗಟು ಹಣದುಬ್ಬರ!

ಕಳೆದು ತಿಂಗಳಿಂದ ಇಳಿಕೆಯತ್ತ ಮುಖಮಾಡಿದ್ದ ಸಗಟು ಹಣದುಬ್ಬರ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿದ್ದು, ಶೇ.0.63ರಷ್ಟು ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದು ತಿಂಗಳಿಂದ ಇಳಿಕೆಯತ್ತ ಮುಖಮಾಡಿದ್ದ ಸಗಟು ಹಣದುಬ್ಬರ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿದ್ದು, ಶೇ.0.63ರಷ್ಟು ಏರಿಕೆಯಾಗಿದೆ.

ಅಂಕಿಅಂಶಗಳು ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಕೇಂದ್ರೀಯ ಅಂಕಿಅಂಶ ಕಾರ್ಯಾಲಯವು ಈ ತಿಂಗಳ ಹಣದುಬ್ಬರ ವಿವರಗಳನ್ನು ಇಂದು ಬಿಡುಗಡೆ ಮಾಡಿದ್ದು, ಸಗಟು ದರ ಸೂಚ್ಯಂಕ ಜುಲೈ ತಿಂಗಳಲ್ಲಿ 1.88ಕ್ಕೆ  ಏರಿಕೆಯಾಗಿದೆ. ಕಳೆದ ವರ್ಷದ ಜುಲೈ ತಿಂಗಳ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.0.63ರಷ್ಟು ಚೇತರಿಕೆ ಕಂಡುಬಂದಿದೆ.

ಸಗಟು ಆಹಾರ ಧಾನ್ಯಗಳ ದರ ಕೂಡ ಜುಲೈ ತಿಂಗಳಲ್ಲಿ 2.12ರಷ್ಟಿದ್ದು, ಈ ಹಿಂದಿನ ಅಂದರೆ ಜೂನ್ ತಿಂಗಳಲ್ಲಿ ಈ ಪ್ರಮಾಣ 1.25ರಷ್ಟಿತ್ತು. ಇದೀಗ ಹಣದುಬ್ಬರ ದರ ಚೇತರಿಕೆಯಿಂದಾಗಿ ಆರ್ ಬಿಐ ಮೇಲಿದ್ದ ಒತ್ತಡವನ್ನು ಕೊಂಚ  ಮಟ್ಟಿಗೆ ತಗ್ಗಿಸಿದ್ದು, ಈ ಹಿಂದೆ ಹಣದುಬ್ಬರ ನಿಯಂತ್ರಣಕ್ಕಾಗಿ ಆರ್ ಬಿಐ ತನ್ನ ಆರ್ಥಿಕ ನೀತಿಯ ಮೂಲ ಅಂಕಗಳನ್ನು 25ಕ್ಕೆ ಇಳಿಸಿಕೊಂಡಿತ್ತು. ಇದು 2010 ನವೆಂಬರ್ ನ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ ಇದು ಶೇ.6ರಷ್ಟು   ಕುಸಿತವಾಗಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಅನ್ವಯ ಗ್ರಾಹಕ ಹಣದುಬ್ಬರ ಪ್ರಮಾಣ ಕೂಡ ಚೇತರಿಕೆ ಕಾಣುವ ಮುನ್ಸೂಚನೆ ನೀಡಿದೆ. ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವಂತೆ ಗ್ರಾಹಕ ಹಣದುಬ್ಬರ ಪ್ರಮಾಣ 1.87 ಕ್ಕೆ  ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ಪ್ರಮಾಣ 1.54ರಷ್ಟಿತ್ತು. ಅಂತೆಯೇ ಚಿಲ್ಲರೆ ಹಣದುಬ್ಬರ ಪ್ರಮಾಣ ಕೂಡ ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ಆರ್ ಬಿಐ  ಅಭಿಪ್ರಾಯಪಟ್ಟಿದ್ದು, ಅಕ್ಟೋಬರ್ ನಿಂದ ಡಿಸೆಂಬರ್ ವೇಳೆಗೆ ಶೇ.3.5 ರಿಂದ 4.5 ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com