ಮೂರು ವರ್ಷಗಳಲ್ಲಿ ಗರಿಷ್ಠ ಮಟ್ಟ ಮುಟ್ಟಿದ ಪೆಟ್ರೋಲ್ ದರ

ಜುಲೈ ತಿಂಗಳಿನಿಂದ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 6 ರೂಪಾಯಿ ಹೆಚ್ಚಳವಾಗಿದೆ, ಮೂರು ವರ್ಷಗಳಲ್ಲಿ ಇದು ಅತ್ಯಧಿಕ ದರದ ಬೆಲೆಯೇರಿಕೆಯಾಗಿದ್ದು, ಪ್ರತಿ ದಿನವೂ ಪೆಟ್ರೋಲ್ ದರಗಳು ಪರಿಷ್ಕರಿಸಲ್ಪಡುತ್ತಿದೆ
ವಾಹನ ಚಾಲಕನು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಪಂಪ್ ಅನ್ನು ಹಿಡಿದಿರುವುದು
ವಾಹನ ಚಾಲಕನು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಪಂಪ್ ಅನ್ನು ಹಿಡಿದಿರುವುದು
ಹೊಸದಿಲ್ಲಿ: ಜುಲೈ ತಿಂಗಳಿನಿಂದ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 6 ರೂಪಾಯಿ ಹೆಚ್ಚಳವಾಗಿದೆ, ಮೂರು ವರ್ಷಗಳಲ್ಲಿ ಇದು ಅತ್ಯಧಿಕ ದರದ ಬೆಲೆಯೇರಿಕೆಯಾಗಿದ್ದು, ಪ್ರತಿ ದಿನವೂ ಪೆಟ್ರೋಲ್ ದರಗಳು ಪರಿಷ್ಕರಿಸಲ್ಪಡುತ್ತಿದೆ
ಡೀಸೆಲ್ ಬೆಲೆ ರೂ 3.67 ರಷ್ಟು ಏರಿಕೆಯಾಗಿದೆ ಮತ್ತು ಈಗ ದೆಹಲಿಯಲ್ಲಿ ಲೀಟರ್ ಗೆ 57.03 ರೂ.ಗೆ ನಿಂತಿದೆ. ನಾಲ್ಕು ತಿಂಗಳುಗಳಲ್ಲಿ ರಾಜ್ಯಗಳ ಒಡೆತನದ ತೈಲ ಕಂಪೆನಿಗಳ ಅಂಕಿ ಅಂಶಗಳ ಪ್ರಕಾರ ಇದು ಅತಿ ಹೆಚ್ಚು ಬೆಲೆಯಾಗಿದೆ. 
ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಒಂದಕ್ಕೆ 69.04 ರೂ.ಇದೆ, ಆಗಸ್ಟ್ 2014 ರ ದ್ವಿತೀಯಾರ್ಧದಲ್ಲಿ ಇದು 70.33 ರೂ.ಇತ್ತು.
ಜೂನ್ ನಲ್ಲಿ ಕೇಂದ್ರ ಸ್ವಾಮ್ಯದ ತೈಲ ಕಂಪೆನಿಗಳು 15 ವರ್ಷ ಹಳೆಯ ಪದ್ದತಿಯಾಗಿದ್ದ ದರ ಪರಿಷ್ಕರಣೆ ಪದ್ದತಿಯನ್ನು ಕೊನೆಗೊಳಿಸಿ  ವೆಚ್ಚದಲ್ಲಿನ ವ್ಯತ್ಯಾಸಕ್ಕೆ ಅನುಸಾರವಾಗಿ ಕ್ರಿಯಾತ್ಮಕ ದೈನಂದಿನ ಬೆಲೆ ಪರಿಷ್ಕರಣೆಗಳನ್ನು ಅಳವಡಿಸಿಕೊಂಡವು.
ಜೂನ್ 16 ರಿಂದ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದೆ.
ಮೊದಲ ಹದಿನೈದು ತಿಂಗಳಲ್ಲಿ ದರವು ಕುಸಿದರೂ ಜುಲೈ 3 ರಿಂದ ಏರುಗತಿಯಲ್ಲಿ ಸಾಗಿದೆ.
ಜೂನ್ 16 ರಂದು ಪೆಟ್ರೋಲ್ ಬೆಲೆ 65.48 ರೂ.ಗೆ ಮತ್ತು ಜುಲೈ 2 ರೊಳಗೆ 63.06 ರೂ.ಗೆ ಇಳಿದಿತ್ತು. ಆದರೆ, ನಾಲ್ಕು ಬಾರಿ ಪ್ರತಿ ಲೀಟರ್ ಗೆ 2-9 ಪೈಸೆ ಇಳಿಕೆಯಾದದ್ದನ್ನು ಹೊರತುಪಡಿಸಿ ಪ್ರತಿ ದಿನವೂ ದರಗಳು ಏರಿಕೆಯಾಗಿದೆ.
ಅದೇ ರೀತಿ, ಜೂನ್ 16 ರಂದು ಡೀಸೆಲ್ ಲೀಟರ್ ಒಂದಕ್ಕೆ 54.49 ರೂ. ಮತ್ತು ಜುಲೈ 2 ರಂದು 53.36 ರೂ.ಗೆ ಇತ್ತು. ಅಲ್ಲಿಂದೀಚೆಗೆ, ಪೆಟ್ರೋಲ್ಗಿಂತಲೂ ಹೆಚ್ಚಿನ ಬಾರಿ ಡೀಸೆಲ್ ದರಗಳ ಇಳಿಕೆಯು ಸಂಭವಿಸಿದೆ ಆದರೆ ಕೂಡ ಇಂದು ಡೀಸೆಲ್ ಬೆಲೆಯಲ್ಲಿಯೂ ಏರಿಕೆ ಕಾಣುತ್ತಿದೆ.
"ಹಿಂದೆ, ಪ್ರತಿಯೊಬ್ಬರೂ  ಲೀಟರ್ ಗೆ 2 ಅಥವಾ 3 ರೂಪಾಯಿಗಳ ದರದಲ್ಲಿ ಏರಿಕೆಯಾಗುತ್ತಿರುವಾಗ ಬೆಲೆ ಹೆರ್ಚ್ಚಳವಾಗಿದೆ ಎನ್ನುತ್ತಿದ್ದರು. ಈಗ ಪ್ರತಿ ದಿನವೂ 1 ಪೈಸೆಯಿಂದ 15 ಪೈಸೆಯಷ್ಟು ಹೆಚ್ಚಳವಾಗುತ್ತಿದೆ, ಇದು ಯಾರೂ ಗಮನಿಸದೆ ಇರುವ ಬೆಲೆ ಏರಿಕೆಯಾಗಿದೆ," ಹಿರಿಯ ತೈಲ ಕಂಪನಿ ಕಾರ್ಯನಿರ್ವಾಹಕ ಒಬ್ಬರು ತಿಳಿಸಿದರು..
ದಿನನಿತ್ಯದ ಬೆಲೆ ಪರಿಷ್ಕರಣೆ ಎಂದರೆ ಗ್ರಾಹಕರಿಗೆ ಅಂತರರಾಷ್ಟ್ರೀಯ ತೈಲ ಬೆಲೆಯ ಹೆಚ್ಚಳ ಅಥವಾ ಇಳಿಕೆಯ ತಕ್ಷಣದ ವರ್ಗಾವಣೆ ಆಗಿದೆ.
ಏಪ್ರಿಲ್ 1, 2002 ರಂದು ಸ್ವಯಂ ಇಂಧನ ನಿಯಂತ್ರಣದಡಿಯಲ್ಲಿ ಪ್ರತಿ ತಿಂಗಳು 1 ಮತ್ತು 16 ನೇ ದಿನಗಳಂದು ತೈಲ ಬೆಲೆ ಪರಿಷ್ಕರಣೆ ಪ್ರಾರಂಭವಾಗಿತ್ತು, ಇದು ಹಿಂದಿನ ಅಂತರರಾಷ್ಟ್ರೀಯ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಮೇಲೆ ಆಧಾರಿತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com