ಸಾಂದರ್ಭಿಕ ಚಿತ್ರ
ವಾಣಿಜ್ಯ
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಇಲ್ಲ: ಕೇಂದ್ರ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ...
ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಸಾಧ್ಯತೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿಲ್ಲ ಎಂದಿರುವ ಪ್ರಧಾನ್, ಪಾರದರ್ಶಕತೆ ತರುವ ಉದ್ದೇಶದಿಂದ ತೈಲ ಬೆಲೆಯನ್ನು ನಿತ್ಯ ಪರಿಷ್ಕಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರುಗತಿಯಲ್ಲಿ ಸಾಗುತ್ತಿದ್ದು, ಕಳೆದ ಜುಲೈನಿಂದ ಪ್ರತಿ ಲಿಟರ್ ಪೆಟ್ರೋಲ್ ಗೆ 6 ರುಪಾಯಿ ಹೆಚ್ಚಳವಾಗಿದೆ.
ಈ ಹಿಂದೆ 15 ದಿನಕ್ಕೊಮ್ಮೆ ದರ ಪರಿಷ್ಕರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈಗ ನಿತ್ಯ ದರ ಪರಿಷ್ಕರಣೆ ಮಾಡುತ್ತಿದ್ದು, ಪೆಟ್ರೋಲ್- ಡೀಸೆಲ್ ದರ ಪ್ರತಿ ದಿನ ಮುಂಜಾನೆ 6 ಗಂಟೆಗೆ ಪರಿಷ್ಕರಣೆಯಾಗುವ ವ್ಯವಸ್ಥೆ ಜಾರಿಯಾಗಿ ಎರಡೂವರೆ ತಿಂಗಳಲ್ಲಿ ಪೆಟ್ರೋಲ್ ದರ 6 ರು., ಡೀಸೆಲ್ ದರ ಸುಮಾರು 3.65 ರು. ಏರಿಕೆಯಾಗಿದ್ದು, ಸದ್ದಿಲ್ಲದೆ ಗ್ರಾಹಕರ ಮೇಲೆ ಹೊರೆ ಬೀಳುತ್ತಿದೆ.
ರಾಜ್ಯದಲ್ಲಿ ಪೆಟ್ರೋಲ್ ದರ ಸದ್ಯ 70.81 ರು. ಹಾಗೂ ಡೀಸೆಲ್ ದರ 57.66 ರು. ಇದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ 69.12 ರು. ಹಾಗೂ ಡೀಸೆಲ್ ದರ 57.01ರಷ್ಟಿದ್ದು, ನಾಲ್ಕು ತಿಂಗಳಲ್ಲೇ ಇದು ಅತೀ ಹೆಚ್ಚು ದರ ಎಂಬುದು ಅಂಕಿಸಂಖ್ಯೆಯಿಂದ ತಿಳಿದು ಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ