ಸಾಂದರ್ಭಿಕ ಚಿತ್ರ
ವಾಣಿಜ್ಯ
ಮುಂದಿನ ವರ್ಷ ಚೀನಾದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ: ಚಿಂತಕರ ಸಮೂಹ ಅಭಿಮತ
ಈ ವರ್ಷ ಚೀನಾದ ಆರ್ಥಿಕ ಬೆಳವಣಿಗೆ ಸುಧಾರಣೆಯಾಗಿದ್ದು ಮುಂದಿನ ವರ್ಷ ಕುಂಠಿತವಾಗುವ ....
ಬೀಜಿಂಗ್: ಈ ವರ್ಷ ಚೀನಾದ ಆರ್ಥಿಕ ಬೆಳವಣಿಗೆ ಸುಧಾರಣೆಯಾಗಿದ್ದು ಮುಂದಿನ ವರ್ಷ ಕುಂಠಿತವಾಗುವ ಸಾಧ್ಯತೆಯಿದೆ ಎಂದು ದೇಶದ ಚಿಂತಕರ ಸಮೂಹ ಹೇಳಿದೆ. ಈ ವರ್ಷ ದೇಶದ ಬೆಳವಣಿಗೆಯ ಕ್ರಿಯಾತ್ಮಕತೆ ಮರುಪಡೆಯಲು ರಾಜಕೀಯ ಮುಖಂಡರು ಎದುರು ನೋಡಿದ್ದರು ಎಂದು ಹೇಳಿದ್ದಾರೆ.
ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾತ್ಮಕ ಮುಂದುವರಿಕೆಯಿಂದ ಚೀನಾ ಮುಂದಿನ ವರ್ಷ ಆರ್ಥಿಕತೆಯಲ್ಲಿ ಹಿಂಜರಿಕೆ ಕಾಣಬಹುದು ಎಂದು ಚೀನಾದ ಸಮಾಜ ವಿಜ್ಞಾನ ಅಕಾಡೆಮಿ(ಸಿಎಎಸ್ಎಸ್) ಅಂದಾಜಿಸಿದೆ.
ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ ಸಿಎಎಸ್ಎಸ್, ವಿಶ್ವದ ಎರಡನೇ ಆರ್ಥಿಕ ಬಲಿಷ್ಠ ದೇಶವಾದ ಚೀನಾದ ಆರ್ಥಿಕತೆ 2017ರಲ್ಲಿ ಶೇಕಡಾ 6.8ರಷ್ಟು ವಿಸ್ತರಣೆಯಾಗಿದ್ದು ಮುಂದಿನ ವರ್ಷ ಶೇಕಡಾ 6.7ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಬೀಜಿಂಗ್ ನಲ್ಲಿ ಕೇಂದ್ರ ಆರ್ಥಿಕ ಸಮ್ಮೇಳನವೆಂಬ ಪ್ರಮುಖ ಆರ್ಥಿಕ ಸಭೆಯಲ್ಲಿ ಈ ವಿಶ್ಲೇಷಣೆ ಆರ್ಥಿಕ ತಜ್ಞರಿಂದ ನಡೆಯಿತು. ಸಮ್ಮೇಳನದಲ್ಲಿ ಮುಂದಿನ ವರ್ಷಕ್ಕೆ ಮಾಡಬೇಕಾದ ಯೋಜನೆಗಳು ಮತ್ತು ದೇಶದ ಬೆಳವಣಿಗೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ವಿಶ್ಲೇಷಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ