ರಿಲಾಯನ್ಸ್ ಜಿಯೋ ಎಫೆಕ್ಟ್: ಬಿಎಸ್ ಎನ್ ಎಲ್ ನಿಂದ ಬಂಪರ್ ಆಫರ್

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ರಿಲಯನ್ಸ್‌ ಜಿಯೋಗೆ ಸಡ್ಡು ಹೊಡೆಯಲು ಬಿಸ್‌‌ಎನ್‌ಎಲ್‌ ...
ಬಿಎಸ್ ಎನ್ ಎಲ್
ಬಿಎಸ್ ಎನ್ ಎಲ್

ನವದೆಹಲಿ: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ರಿಲಯನ್ಸ್‌ ಜಿಯೋಗೆ ಸಡ್ಡು ಹೊಡೆಯಲು ಬಿಸ್‌‌ಎನ್‌ಎಲ್‌  ಮುಂದಾಗಿದೆ.

ತನ್ನ ಗ್ರಾಹಕರನ್ನ ಉಳಿಸಿಕೊಳ್ಳಲು  ಈಗಾಗಲೇ ಹಲವು ಕೊಡುಗೆ ನೀಡಿದೆ. ಇದೀಗ ಅತ್ಯಂತ ಅಗ್ಗದ ದರದಲ್ಲಿ ಮತ್ತೊಂದು ಆಫರ್‌ ನೀಡಿದೆ.

ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಎಸ್‍ಎನ್‍ಎಲ್ ಹೆಣಗಾಡುತ್ತಿದೆ. ಹೀಗಾಗಿ ಸ್ಪೆಷಲ್ ಟಾರೀಫ್‌ ವೋಚರ್‌ ಅಡಿ ಬಿಎಸ್‍ಎನ್‍ಎಲ್ ಕೇವಲ 36ರೂಪಾಯಿಗೆ 1 ಜಿಬಿ ಡೇಟಾ ನೀಡಲಿದೆ.  

ಅಲ್ಲದೇ 291 ಪ್ಲಾನ್ ಬಳಸುತ್ತಿರುವ ಗ್ರಾಹಕರಿಗೆ ಇಲ್ಲಿಯವರೆಗೆ 2 ಜಿಬಿ ಡೇಟಾ ಸಿಗುತ್ತಿತ್ತು. ಇನ್ನು ಮುಂದೆ ಈ ಪ್ಲಾನ್ ಬಳಸುವವರಿಗೆ 28 ದಿನಗಳವರೆಗೆ 8 ಜಿಬಿ ಡೇಟಾ ಸಿಗಲಿದೆ. 78 ರೂ. ಪ್ಲಾನ್ ಬಳಸುವ ಗ್ರಾಹಕರಿಗೆ ಡಬಲ್‌ ಡೇಟಾ ನೀಡಲು ಬಿಎಸ್‌ಎನ್‌‌ಎಲ್‌ ಮುಂದಾಗಿದ್ದು, 78 ಪ್ಲಾನ್‌ಗೆ 2 ಬಿಜಿಯಿಂದ 4 ಜಿಬಿ ಡೇಟಾ ಸಿಗಲಿದೆ.

36ರೂಪಾಯಿಗೆ 1 ಜಿಬಿ ನೀಡುವುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆ ಆಫರ್‌ ಎಂದು ಬಿಎಸ್‍ಎನ್‍ಎಲ್ ಹೇಳಿದೆ. ರಿಲಾಯನ್ಸ್ ಜಿಯೋ ಮಾರ್ಚ್ 31 2017 ರವರೆಗೆ ಗ್ರಾಹಕರಿಗೆ ಉಚಿಚ 4ಜಿ ಸೇವೆ ಆಫರ್ ನೀಡಿದೆ. 1 ಜಿಬಿ ಬಳಕೆ ನಂತರ ಇಂಟರ್ ನೆಟ್ ಸೇವೆ ನಿಧಾನಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com