500 ಮತ್ತು 1000ದ ಹಳೆಯ ನೋಟುಗಳನ್ನು ನವೆಂಬರ್ 8ರಂದು ಚಲಾವಣೆ ರದ್ದುಗೊಳಿಸಿದ ನಂತರ ನೋಟುಗಳಿರುವವರು ಡಿಸೆಂಬರ್ 30ರೊಳಗೆ ಬ್ಯಾಂಕಿನಲ್ಲಿ ಠೇವಣಿಯಿಡುವಂತೆ ಕೇಂದ್ರ ಸರ್ಕಾರ ತಿಳಿಸಿತ್ತು. ಆ ನಂತರ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕಿನಲ್ಲಿ ಹಣ ಠೇವಣಿಯಾದ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. 2 ಲಕ್ಷದಿಂದ 80 ಲಕ್ಷದವರೆಗೆ ಮತ್ತು 80 ಲಕ್ಷದಿಂದ ಹೆಚ್ಚು ಹಣವನ್ನು ಠೇವಣಿಯಿರಿಸಿದ್ದನ್ನು ಪ್ರತ್ಯೇಕಗೊಳಿಸಿತ್ತು. ಠೇವಣಿಯಿಟ್ಟ ಹಣ ಮತ್ತು ಠೇವಣಿದಾರರ ಪರಿಚಯವನ್ನು ಹೊಂದಿಕೆ ಮಾಡಿ ಹೊಂದಾಣಿಕೆಯಾಗದವರಿಗೆ ಆದಾಯ ತೆರಿಗೆ ಇಲಾಖೆ, ಯಾವ ಮೂಲದಿಂದ ಹಣ ಬಂದಿದೆ ಎಂದು ತೋರಿಸುವಂತೆ ಎಸ್ಎಂಎಸ್ ಮತ್ತು ಇ-ಮೇಲ್ ಕಳುಹಿಸಿತ್ತು.