ಪ್ರೇಮಿಗಳ ದಿನ: ವ್ಯಾಪಾರ, ವಹಿವಾಟು ವ್ಯಾಪಕ ಹೆಚ್ಚಳ

ಭಾರತದ ವ್ಯಾಲೆಂಟೈನ್ಸ್ ಡೇ ಮಾರುಕಟ್ಟೆಯ ವ್ಯಾಪ್ತಿಯ ಬಗ್ಗೆ ಅಧಿಕೃತ ಅಂದಾಜು ಇಲ್ಲ. ಭಾರತ ಕೈಗಾರಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಭಾರತದ ವ್ಯಾಲೆಂಟೈನ್ಸ್ ಡೇ ಮಾರುಕಟ್ಟೆಯ ವ್ಯಾಪ್ತಿಯ ಬಗ್ಗೆ ಅಧಿಕೃತ ಅಂದಾಜು ಇಲ್ಲ. ಭಾರತ ಕೈಗಾರಿಕೆ ಮತ್ತು ವಾಣಿಜ್ಯ ಅಸೋಸಿಯೇಟೆಡ್ ಚೇಂಬರ್ಸ್(ಅಸ್ಸೊಚಮ್) ಅಂದಾಜಿನ ಪ್ರಕಾರ 2014ರಲ್ಲಿ ವರ್ಷದಲ್ಲಿ 22,000 ಕೋಟಿ ರೂಪಾಯಿ ವಹಿವಾಟು ಪ್ರೇಮಿಗಳ ದಿನದಂದು ನಡೆಯುತ್ತದೆ.
ಪ್ರೇಮಿಗಳ ದಿನದಂದು ಜನರು ಖರೀದಿಸುವ ದುಬಾರಿ ವಾಚು, ಫ್ಯಾನ್ಸಿ ಜ್ಯುವೆಲ್ಲರಿ, ದುಬಾರಿ ಬೊಂಬೆಗಳು, ಗುಲಾಬಿ ಇತ್ಯಾದಿಗಳ ವಹಿವಾಟುಗಳಾಗಿರುತ್ತವೆ. ಮಾರುಕಟ್ಟೆ ತಜ್ಞರ ಪ್ರಕಾರ, ಇಂದು ವ್ಯಾಲೆಂಟೈನ್ಸ್ ಡೇ ವಹಿವಾಟು ವರ್ಷದಿಂದ ವರ್ಷಕ್ಕೆ  ವಿಸ್ತರಣೆಯಾಗುತ್ತಿದೆ.
ನೋಟುಗಳ ಅಮಾನ್ಯತೆ ನಂತರ ಕುಂಠಿತಗೊಂಡಿದ್ದ ವ್ಯಾಪಾರ ವಹಿವಾಟು ವ್ಯಾಲೆಂಟೈನ್ಸ್ ಡೇಯಂದು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಇ-ಟೈಲರ್ ನಿಂದ ಹಿಡಿದು ಸ್ಥಳೀಯ ಗುಲಾಬಿ ಮಾರಾಟಗಾರರು.
ಇಂದು ಜನರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚಾಗಿದೆ. ಕೇವಲ  ಯುವಕರು ಮಾತ್ರವಲ್ಲದೆ ಮಧ್ಯ ವಯಸ್ಸಿನವರು ಕೂಡ ಪ್ರೇಮಿಗಳ ದಿನದಂದು ವಸ್ತುಗಳನ್ನು ಖರೀದಿಸುತ್ತಾರೆ ಎನ್ನುತ್ತಾರೆ ನೊವೆಟಲ್ ಹೈದರಾಬಾದ್ ವಿಮಾನ ನಿಲ್ದಾಣದ ಆಹಾರ ಮತ್ತು ಪಾನೀಯ ವಿಭಾಗದ ನಿರ್ದೇಶಕ ಸೌಮಿತ್ರ ಪಹರಿ. ಈಗಾಗಲೇ ವ್ಯಾಲೆಂಟೈನ್ಸ್ ಡೇಗೆ ಕಾಯ್ದಿರಿಸುವಿಕೆ ಆರಂಭವಾಗಿದ್ದು, ನಗದುರಹಿತ ವಹಿವಾಟು ಹೆಚ್ಚಿನ ಹೊಟೇಲ್ ಗಳಲ್ಲಿ ನಡೆಯುವುದರಿಂದ ಜನರು ಆ ದಿನ ಅಪಾರ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ.
ಪೆಟಿಎಂನ ಹಿರಿಯ ಉಪಾಧ್ಯಕ್ಷ ಕಿರಣ್ ವಾಸಿರೆಡ್ಡಿ, ಡಿಜಿಟಲೀಕರಣವಾಗಿರುವುದರಿಂದ ವ್ಯಾಲೆಂಟೈನ್ಸ್ ಡಗೆ ಖರ್ಚು ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆನ್ ಲೈನ್ ವಹಿವಾಟು ಜಾಸ್ತಿಯಾಗಿದೆ ಎನ್ನುತ್ತಾರೆ.
ಹಳೆಯ ನೋಟುಗಳ ನಿಷೇಧ ಪ್ರೇಮಿಗಳನ್ನು ಹಿಂದೇಟು ಹಾಕಿಲ್ಲ. ನಗರದ ಹಲವು ಭಾಗಗಳಿಂದ ನಮಗೆ ಆರ್ಡರ್ ಬಂದಿವೆ ಎನ್ನುತ್ತಾರೆ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಫೆರ್ನ್ಸ್ ಮತ್ತು ಪೆಟಲ್ಸ್ ನ ವಕ್ತಾರರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com