ಜೂಮ್ ಏರ್ ವಿಮಾನ
ವಾಣಿಜ್ಯ
ಭಾರತದ ನೂತನ ನಾಗರಿಕ ವಿಮಾನಯಾನ ಜೂಮ್ ಏರ್ ಕಾರ್ಯಾಚರಣೆ ಆರಂಭ
ದೆಹಲಿ-ಕೋಲ್ಕತ್ತಾ-ದುರ್ಗಾಪುರ್-ದೆಹಲಿ ಮಾರ್ಗವಾಗಿ ಜೂಮ್ ಏರ್ ವಿಮಾನಯಾನ ಸಂಸ್ಥೆ ನಿನ್ನೆ(ಫೆಬ್ರವರಿ 15)ಯಿಂದ...
ದೆಹಲಿ-ಕೋಲ್ಕತ್ತಾ-ದುರ್ಗಾಪುರ್-ದೆಹಲಿ ಮಾರ್ಗವಾಗಿ ಜೂಮ್ ಏರ್ ವಿಮಾನಯಾನ ಸಂಸ್ಥೆ ನಿನ್ನೆ(ಫೆಬ್ರವರಿ 15)ಯಿಂದ ಕಾರ್ಯಾಚರಣೆ ಆರಂಭಿಸಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಂದ ಫೆಬ್ರವರಿ 3ರಂದು ಕಾರ್ಯನಿರ್ವಹಣೆ ಅನುಮತಿ ಜೂಮ್ ಏರ್ ಗೆ ಸಿಕ್ಕಿತು. ಮೊದಲ ಹಾರಾಟವನ್ನು ಮೊನ್ನೆ 12ರಂದು ದೆಹಲಿಯಿಂದ ದುರ್ಗಾಪುರ್ ಗೆ ನಡೆಸಿತು.
ಭಾರತದ ಹೊಸ ಪೂರ್ಣ ಸೇವೆ ವಿಮಾನಯಾನವಾದ ಜೂಮ್ ಏರ್ ಗೆ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಕಳೆದ ಭಾನುವಾರ ಚಾಲನೆ ನೀಡಿದರು. ದೇಶೀಯ ವಲಯದಲ್ಲಿ ಭಾರತದ 10ನೇ ವಿಮಾನ ಜೂಮ್ ಏರ್ ಆಗಿದೆ. ಪ್ರಯಾಣಿಕರ ರೈಲು ಜೂಮ್ ಏರ್ ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಭಾರತದ ಇತರ ವಿಮಾನಯಾನ ಸಂಸ್ಥೆಗಳು ಬೇರೆ ಭಾಗಗಳಲ್ಲಿ ಒದಗಿಸದಿರುವ ಸೇವೆಗಳ ಕಡೆಗೆ ಜೂಮ್ ಏರ್ ಗಮನಹರಿಸಲು ನಿರ್ಧರಿಸಿದೆ.
ಗುರುಂಗಾವ್ ಮೂಲದ ಜೂಮ್ ಏರ್ ನ್ನು ದೆಹಲಿಯ ಝೆಕ್ಸಸ್ ಏರ್ ಸರ್ವಿಸಸ್ ಪ್ರಚುರಪಡಿಸುತ್ತದೆ.
ಜೂಮ್ ಏರ್, ಬೊಂಬಾರ್ಡಿಯರ್ ಸಿಆರ್-ಜೆ200 ಎಲ್ ಆರ್ ಸರಣಿ ಅವಳಿ ಎಂಜಿನ್ ಜೆಟ್ ವಿಮಾನದ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಡಬ್ಲಿನ್ ನ ಸಿಆರ್ ಜೆ ಏರ್ ಕ್ರಾಫ್ಟ್ ಲೀಸಿಂಗ್ ನಿಂದ ಮೂರು ವಿಮಾನಗಳನ್ನು ಗುತ್ತಿಗೆಗೆ ಪಡೆದಿದೆ.
ದುರ್ಗಾಪುರದಿಂದ ಪ್ರತಿದಿನ ದೆಹಲಿ, ಕೋಲ್ಕತ್ತಾ, ಮುಂಬೈಗಳಿಗೆ ಸಂಪರ್ಕ ಸಾಧಿಸುವ ಮೊದಲ ದೇಶೀಯ ವಿಮಾನ ಜೂಮ್ ಏರ್ ಆಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲಿದೆ. ಅಲ್ಲದೆ ಶಿಲ್ಲಾಂಗ್ ನಿಂದಲೂ ಪ್ರಮುಖ ನಗರಗಳಿಗೆ ಸಂಪರ್ಕ ಸೇವೆ ಒದಗಿಸಲಿದೆ.
ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಪೂರ್ಣ ಸೇವೆ ಒದಗಿಸಲಿದೆ. ಜೂಮ್ ಈಟ್ ಹೆಸರಿನಲ್ಲಿ ಭೋಜನ ಕೂಡ ಸಿಗಲಿದೆ.
ಕಂಪೆನಿ ಈಗಾಗಲೇ 20 ಕೋಟಿ ರೂಪಾಯಿ ಬಂಡವಾಳ ಹೂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯ ವಿಸ್ತರಣೆಗೆ ಮತ್ತೆ 20 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಸಾಲರಹಿತ ಕಂಪೆನಿ ಜೂಮ್ ಏರ್ ಆಗಿದೆ ಎಂದು ವಿಮಾನಯಾನದ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೌಸ್ತವ್ ಎಂ.ದ್ಹರ್ ತಿಳಿಸಿದ್ದಾರೆ.
ಶೇಕಡಾ 70ರಿಂದ 75ರಷ್ಟು ಸೀಟುಗಳನ್ನು ಆರಂಭದ 18 ತಿಂಗಳಲ್ಲಿ ಭರ್ತಿ ಮಾಡುವ ಸಾಧ್ಯತೆಗಳಿದ್ದು ಪ್ರತಿ ಟಿಕೆಟ್ ಬೆಲೆ ಸರಾಸರಿ 3,000 ರೂಪಾಯಿ ಇರಲಿದೆ.
ಜೂಮ್ ಏರ್ ನಲ್ಲಿ 50 ಪ್ರಧಾನ ಆಸನದ ದೂರವ್ಯಾಪ್ತಿಯ ಆವೃತ್ತಿಗಳು, ಸ್ತಬ್ಧ ಕ್ಯಾಬಿನ್ ಮತ್ತು ವೇಗದ ಕ್ರೂಸ್ ತಂತ್ರಜ್ಞಾನ,ಜಿಇ ಏರೋಸ್ಪೇಸ್ ಹೈ ಪರ್ಫಾರ್ಮೆನ್ಸ್ CF34-3B19 ಎಂಜಿನ್ ಅಳವಡಿಸಲಾಗಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ