2015-16 ರಲ್ಲಿ ಗುಜರಾತ್ ಐಟಿ ಕ್ಷೇತ್ರದಲ್ಲಿ 35,200 ಕೋಟಿ ಹೂಡಿಕೆ: ಅಸೋಚಾಮ್

2015-16 ನೇ ಸಾಲಿನಲ್ಲಿ ಗುಜರಾತ್ ಐಟಿ ಕ್ಷೇತ್ರಕ್ಕೆ 35,200 ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಗುಜರಾತ್
ಗುಜರಾತ್
ಅಹ್ಮದಾಬಾದ್: 2015-16 ನೇ ಸಾಲಿನಲ್ಲಿ ಗುಜರಾತ್ ಐಟಿ ಕ್ಷೇತ್ರಕ್ಕೆ 35,200 ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 
2005-06 ರಲ್ಲಿ ಕೇವಲ 700 ಕೋಟಿ ರೂಗಳಷ್ಟಿದ್ದ ಹೂಡಿಕೆ ಮೊತ್ತ 10 ವರ್ಷಗಳಲ್ಲಿ 35,200 ಕೋಟಿಗೆ ತಲುಪಿದೆ ಎಂದು ಕೈಗಾರಿಕಾ ಮಂಡಳಿ ಅಸೋಚಾಮ್ ಹೇಳಿದೆ. ಅಸೋಚಾಮ್ ನ ಆರ್ಥಿಕ ಸಂಶೋಧನಾ ವಿಭಾಗ ಗುಜರಾತ್ ಐಟಿ ಕ್ಷೇತ್ರದ ಹೂಡಿಕೆ ಬಗ್ಗೆ ವಿಶ್ಲೇಷಣೆ ಮಾಡಿದ್ದು, 10 ವರ್ಷಗಳಲ್ಲಿ ಗುಜರಾತ್ ನ ಐಟಿ ಕ್ಷೇತ್ರದ ವಾರ್ಷಿಕ ಬೆಳವಣಿಗೆ ಶೇ.48 ರಷ್ಟಿತ್ತು ಎಂದು ಹೇಳಿದೆ. 
ಇನ್ನು ಭಾರತದ ಐಟಿ ಕ್ಷೇತ್ರದ ಬೆಳವಣಿಗೆ ಶೇ.17 ರಷ್ಟಿದ್ದು ಹೂಡಿಕೆ ಮೊತ್ತ 46,280 ಕೋಟಿಯಿಂದ 2015-16 ರಲ್ಲಿ 2.2 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಅಸೋಚಾಮ್ ತಿಳಿಸಿದೆ. ಹೂಡಿಕೆ ಏರಿಕೆಗೆ ಪೂರಕವಾಗಿ ಮತ್ತಷ್ಟು ಉತ್ತಮ ವಾತಾವರವನ್ನು ಗುಜರಾತ್ ಸರ್ಕಾರ ಹೆಚ್ಚಿಸುವುದಕ್ಕಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಅಸೋಚಾಮ್ ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com