• Tag results for ಗುಜರಾತ್

ಕೊಡಗಿನ ಏರೋನಾಟಿಕಲ್ ವಿದ್ಯಾರ್ಥಿ ಗುಜರಾತಿನಲ್ಲಿ ಸಂಶಯಾಸ್ಪದ ಸಾವು

ಪೈಲೆಟ್ ಆಗುವ ಕನಸು ಹೊತ್ತು ಮಡಿಕೇರಿಯಿಂದ ಗುಜರಾತಿನ ಅಹಮದಾಬಾದ್ ಗೆ ತೆರಳಿ ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

published on : 5th June 2021

ಹೈಕೋರ್ಟ್ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಗುಜರಾತ್ ಚಹಾ ವ್ಯಾಪಾರಿಗೆ 18 ತಿಂಗಳು ಜೈಲು ಶಿಕ್ಷೆ!

2012 ರಲ್ಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರತ್ತ ಚಪ್ಪಲಿ ಎಸೆದಿದ್ದ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಚಹಾ ಮಾರಾಟಗಾರನಿಗೆ 18 ತಿಂಗಳ ಜೈಲು ಶಿಕ್ಷೆ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಶಿಕ್ಷೆ ವಿಧಿಸಿದೆ.

published on : 4th June 2021

ಕೋವಿಡ್ ಲಸಿಕೆ ಕಳ್ಳತನ: ಬೆಂಗಳೂರು ಮಹಿಳೆಯ ಮೊಬೈಲ್ ಸಂಖ್ಯೆ ಬಳಸಿ ಲಸಿಕೆ ಪಡೆದ ಗುಜರಾತ್ ಕುಟುಂಬ!

ಗುಜರಾತ್ ಮೂಲದ ಕುಟುಂಬವೊಂದು ಬೆಂಗಳೂರು ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆ ದಾಖಲಿಸಿ ಕೊರೋನಾ ಲಸಿಕೆ ಪಡೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

published on : 1st June 2021

ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಿ: ಗುಜರಾತ್ ವೈದ್ಯರು

ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್‌ ನ ವೈದ್ಯಕೀಯ ಸಂಘಗಳು ಅಹಮದಾಬಾದ್ ನಗರ ಪೊಲೀಸರನ್ನು ಕೋರಿದ್ದಾರೆ.

published on : 1st June 2021

ತೌಕ್ತೆ ಚಂಡಮಾರುತ: ಗುಜರಾತ್‌ ಗೆ 1 ಸಾವಿರ ಕೋಟಿ ರೂ. ತಕ್ಷಣದ ನೆರವು ಘೋಷಿಸಿದ ಪ್ರಧಾನಿ ಮೋದಿ

ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾಗಿರುವ ಗುಜರಾತ್ ಗೆ ತಕ್ಷಣದ ಪರಿಹಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 1,000 ಕೋಟಿ ರೂ. ನೆರವು ಘೋಷಿಸಿದ್ದಾರೆ.

published on : 19th May 2021

ಗುಜರಾತ್ ಕರಾವಳಿಯತ್ತ ಟೌಕ್ಟೇ ಚಂಡಮಾರುತ; 56 ರೈಲುಗಳು ರದ್ದು, ಭಾರಿ ಮಳೆ

ಟೌಕ್ಟೇ ಚಂಡಮಾರುತ ಗುಜರಾತ್ ಕರಾವಳಿಯತ್ತ ನುಗ್ಗಿದ್ದು, ಮುಂಜಾಗ್ರತ್ರಾ ಕ್ರಮವಾಗಿ ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಶನಿವಾರ ಮೇ 21 ರವರೆಗೆ 56 ರೈಲುಗಳನ್ನು ರದ್ದುಗೊಳಿಸಿದೆ.

published on : 16th May 2021

ಗುಜರಾತ್, ಅಸ್ಸಾಂ, ಕರ್ನಾಟಕ ರಾಜ್ಯಗಳಿಗೆ ಕೋವ್ಯಾಕ್ಸಿನ್ ರವಾನಿಸಲಾಗಿದೆ: ಭಾರತ್ ಬಯೋಟೆಕ್

ಗುಜರಾತ್, ಅಸ್ಸಾಂ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಿಗೆ ಕೋವ್ಯಾಕ್ಸಿನ್ ಕೊರೋನಾ ಲಸಿಕೆಗಳನ್ನು ರವಾನಿಸಲಾಗಿದೆ ಎಂದು ಭಾರತ್ ಬಯೋಟೆಕ್ ಶುಕ್ರವಾರ ಹೇಳಿದೆ.

published on : 14th May 2021

ಕೋವಿಡ್-19 ವಿರುದ್ಧ ಮದ್ದಾಗಿ ಹಸುವಿನ ಸೆಗಣಿ ಥೆರಪಿ ಬಳಸದಿರಲು ವೈದ್ಯರ ಎಚ್ಚರಿಕೆ!

ಹಸುವಿನ ಸೆಗಣಿ ಥೆರಪಿ ಕುರಿತು ಗುಜರಾತಿನ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಸುವಿನ ಸಗಣಿಯನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ವೈರಸ್ ವಿರುದ್ಧ ರಕ್ಷಣೆ ನೀಡುವುದಿಲ್ಲ, ಬದಲು, ಇನ್ನಿತರ ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

published on : 11th May 2021

ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ತಂದೆ ಕೋವಿಡ್ ಗೆ ಬಲಿ

ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರ ತಂದೆ ಭಾನುವಾರ  ಮೃತಪಟ್ಟಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

published on : 9th May 2021

ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು: ಏನಿದು ಫಂಗಲ್ ಇನ್ಫೆಕ್ಷನ್?ಇಲ್ಲಿದೆ ಮಾಹಿತಿ...

ಕೊರೋನಾ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಲ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. 

published on : 9th May 2021

ಗುಜರಾತ್‌ನಲ್ಲಿ ಆಸ್ಪತ್ರೆಗೆ ದಾಖಲಾಗಲು ಕೋವಿಡ್ ಪಾಸಿಟಿವ್ ವರದಿ ಅಗತ್ಯವಿಲ್ಲ

ಅಹಮದಾಬಾದ್: ರಾಜ್ಯದಲ್ಲಿ ಆಸ್ಪತ್ರೆಗಳಿಗೆ ದಾಖಲಾಗಲು ರೋಗಿಗಳು ಕೋವಿಡ್ ಪಾಸಿಟಿವ್ ವರದಿ ತರುವ ಅಗತ್ಯ ಇಲ್ಲ ಎಂದು ಗುಜರಾತ್ ಸರ್ಕಾರ ಶುಕ್ರವಾರ ಘೋಷಿಸಿದೆ.

published on : 7th May 2021

ಗುಜರಾತ್: ಕೋವಿಡ್-19 ನಿರ್ಮೂಲನೆ ಪೂಜೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದ 46 ಜನರ ಬಂಧನ

ಕೊರೋನಾವೈರಸ್ ನಿಮೂರ್ಲನೆಗಾಗಿ ಗುಜರಾತಿನ ಗಾಂಧಿನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೆರವಣಿಗೆಯಲ್ಲಿ ತೆರಳುತ್ತಿದ್ದ 46 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಕೆಲ ದಿನಗಳಲ್ಲಿ ಗುಜರಾತಿನಲ್ಲಿ ಇಂತಹ ಎರಡನೇ ಘಟನೆ ನಡೆದಿದೆ.

published on : 6th May 2021

ಲಸಿಕೆ ವಿತರಣೆಯಲ್ಲಿ ಗುಜರಾತ್ ಮೇಲೆ ಅತಿಯಾದ ಪ್ರೀತಿ, ಕನ್ನಡಿಗರಿಗೆ ತಾರತಮ್ಯ: ಎಚ್ ಡಿಕೆ

ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್‌ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. 

published on : 6th May 2021

ಭರೂಚ್ ಆಸ್ಪತ್ರೆ ಅಗ್ನಿ ದುರಂತ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 

published on : 1st May 2021

ಗುಜರಾತ್ ಆಸ್ಪತ್ರೆ ಬೆಂಕಿ ದುರಂತ: ಸಿಎಂ ವಿಜಯ್ ರೂಪಾನಿ ಸಂತಾಪ, ಮೃತರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರ ಘೋಷಣೆ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

published on : 1st May 2021
1 2 3 4 >