ಮೂರೇ ತಿಂಗಳಲ್ಲಿ 4 ಸಾವಿರಕ್ಕೂ ಅಧಿಕ ನೌಕರರ ಕಡಿತಗೊಳಿಸಿದ ಎಚ್ ಡಿಎಫ್ ಸಿ!

ಬ್ಯಾಂಕಿನ ಲಾಂಭಾಂಶ ಬೆಳವಣಿಗೆಯಲ್ಲಿ ಗಣನೀಯ ಕುಸಿತವಾದ ಹಿನ್ನಲೆಯಲ್ಲಿ ಖ್ಯಾತ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಎಚ್ ಡಿ ಎಫ್ ಸಿ ತನ್ನ ಸುಮಾರು 5 ಸಾವಿರ ನೌಕರರ ಕೆಲಸಕ್ಕೆ ಕತ್ತರಿ ಹಾಕಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬ್ಯಾಂಕಿನ ಲಾಂಭಾಂಶ ಬೆಳವಣಿಗೆಯಲ್ಲಿ ಗಣನೀಯ ಕುಸಿತವಾದ ಹಿನ್ನಲೆಯಲ್ಲಿ ಖ್ಯಾತ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಎಚ್ ಡಿ ಎಫ್ ಸಿ ತನ್ನ ಸುಮಾರು 4 ಸಾವಿರಕ್ಕೂ ಅಧಿಕ ನೌಕರರ ಕೆಲಸಕ್ಕೆ ಕತ್ತರಿ ಹಾಕಿದೆ ಎಂದು  ತಿಳಿದುಬಂದಿದೆ.

ಕಳೆದ ಐದು ವರ್ಷಗಳ ಎಚ್ ಡಿಎಫ್ ಸಿ ಬ್ಯಾಂಕ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಸೆಂಬರ್ ನಲ್ಲಿ ಪ್ರಕಟವಾದ ತ್ರೈಮಾಸಿಕ ಲಾಭಾಂಶ ಶೇ.15ಕ್ಕೆ ಕುಸಿದಿದ್ದು, ಇದೇ ಕಾರಣಕ್ಕೆ ಸಂಸ್ಥೆಯ 4,581 ಸಿಬ್ಬಂದಿಗಳನ್ನು ಸೇವೆಯಿಂದ  ವಜಾಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕಳೆದ ಸೆಪ್ಟೆಂಬರ್ 30ರ ವೇಳೆಗೆ ಎಚ್ ಡಿಎಫ್ ಸಿ ಬ್ಯಾಂಕ್ 95,002 ಸಿಬ್ಬಂದಿಗಳನ್ನು ಹೊಂದಿತ್ತು. ಆದರೆ ಡಿಸೆಂಬರ್ ಅಂತ್ಯದ ವೇಳೆಗೆ ಅಂದರೆ ತ್ರೈಮಾಸಿಕ  ಲಾಭಾಂಶ ಪ್ರಕಟವಾದ ಬಳಿಕ ಸಿಬ್ಬಂದಿಗಳ ಸಂಖ್ಯೆ 90,421ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.

ಭಾರತೀಯ ಬ್ಯಾಂಕಿಂಗ್ ವಲಯದಲ್ಲಿನ ಸ್ಪರ್ಧೆಯಿಂದಾಗಿ ಬ್ಯಾಂಕುಗಳ ನಡುವಿನ ತಿಕ್ಕಾಟದರ ಪ್ರತೀ ವರ್ಷ ಸಾಮಾನ್ಯವಾಗಿ ಶೇ. 16-22ರಷ್ಟಿರುತ್ತದೆ. ಅಂತೆಯೇ ಎಚ್ ಡಿ ಎಫ್ ಸಿ ಬ್ಯಾಂಕಿನ ತಿಕ್ಕಾಟ ದರ ಕೂಡ 18-20ರಷ್ಟಿದೆ.  ಆದರೆ ಬ್ಯಾಂಕಿಗೆ ಸಂಬಂಧಿಸಿದ ಸಿಬ್ಬಂದಿಗಳ ಕಡಿತಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿಲ್ಲ. ಕಡಿತವಾದ 4,581 ಸಿಬ್ಬಂದಿಗಳ ಪೈಕಿ ಹಲವರು ತಾವಾಗಿಯೇ ಕೆಲಸ ಬಿಟ್ಟು ಹೋಗಿದ್ದು, ಇವರ ಬದಲಿಗೆ ಬೇರೊಬ್ಬ  ಕೆಲಸಗಾರರನ್ನು ಸೇರ್ಪಡೆ ಮಾಡಿಕೊಂಡಿಲ್ಲ. ಇದೇ ಕಾರಣಕ್ಕೆ ಸಿಬ್ಬಂದಿಗಳ ಕಡಿತ ದರ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ.

2015ರಲ್ಲಿ ಇದೇ ಎಚ್ ಡಿಎಫ್ ಸಿ ಸಂಸ್ಥೆಯ ನೌಕರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿತ್ತು. 2015ರಲ್ಲಿ ಸುಮಾರು 5,802 ನೂತನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಂಸ್ಥೆ ತನ್ನ ಸಿಬ್ಬಂದಿಗಳ  ಸಂಖ್ಯೆಯನ್ನು 2015 ಡಿಸೆಂಬರ್ ಅಂತ್ಯದ ವೇಳೆಗೆ 84,619ಕ್ಕೆ ಏರಿಕೆ ಮಾಡಿಕೊಂಡಿತ್ತು. ಅಂತೆಯೇ ನೌಕರರ ವೆಚ್ಚ ಕೂಡ 1,657.21 ಕೋಟಿಯಿಂದ 1,688.63 ಕೋಟಿ ರು.ಗೆ ಏರಿಕೆಯಾಗಿತ್ತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com