ನೋಟು ನಿಷೇಧಕ್ಕೂ ಮೊದಲು ಮುದ್ರಣಗೊಂಡ ಹೊಸ ನೋಟಿನ ಪ್ರಮಾಣವನ್ನು ಬಹಿರಂಗಪಡಿಸಲ್ಲ: ಆರ್'ಬಿಐ

ರೂ.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವುದಕ್ಕೂ ಮೊದಲು ಮುದ್ರಣಗೊಂಡಿದ್ದ ಹೊಸ ನೋಟುಗಳ ಪ್ರಮಾಣವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಆರ್'ಬಿಐ ಗುರುವಾರ ಹೇಳಿದೆ...
ಆರ್'ಬಿಐ
ಆರ್'ಬಿಐ

ಮುಂಬೈ: ರೂ.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವುದಕ್ಕೂ ಮೊದಲು ಮುದ್ರಣಗೊಂಡಿದ್ದ ಹೊಸ ನೋಟುಗಳ ಪ್ರಮಾಣವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಆರ್'ಬಿಐ ಗುರುವಾರ ಹೇಳಿದೆ.

ಹಳೆ ನೋಟುಗಳ ಚಲಾವಣೆ ರದ್ದು ಮಾಡುವುದಕ್ಕೂ ಮುನ್ನವೇ ಮುದ್ರಿಸಿಟ್ಟುಕೊಂಡಿದ್ದ ಹೊಸ ನೋಟುಗಳ ಪ್ರಮಾಣವನ್ನು ಬಹಿರಂಗ ಪಡಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿದ್ದ ಆರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್'ಬಿಐ ಅಧಿಕಾರಿಗಳು, ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾಹಿತಿ ಬಹಿರಂಗ ಪಡಿಸುವುದರಿಂದ ಇದು ರಾಷ್ಟ್ರದ ಹಿತಾಸಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ರೂ.500 ಮತ್ತು ರೂ.1,000 ನೋಟುಗಳ ಚಲಾವಣೆ ರದ್ದು ಮಾಡುವುದಕ್ಕೂ ಮುನ್ನ ಎಷ್ಟು ಹೊಸ ರೂ,500 ಹಾಗೂ ರೂ.2000 ನೋಟುಗಳನ್ನು ಮುದ್ರಿಸಿಟ್ಟುಕೊಳ್ಳಲಾಗಿತ್ತು ಎಂದು ಮಾಹಿತಿಯನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಈ ಹಿನ್ನಲೆಯಲ್ಲಿ ಆರ್ ಟಿಐ ಕಾಯ್ದೆಯ 8(1) (ಎ) ಅಡಿಯಲ್ಲಿ ಮಾಹಿತಿ ನೀಡಲಾಗದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com