450 ಕೆಜಿ ತೂಕದ "ಮಿನಿ ಬಲ್ಕ್" ಹೆಸರಿನ ಜಂಬೋ ಸಿಲಿಂಡರ್ ಮಾರುಕಟ್ಟೆಗೆ!

ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ 450 ಕೆಜಿ ತೂಕದ ಜಂಬೋ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ 450 ಕೆಜಿ ತೂಕದ ಜಂಬೋ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಬೃಹತ್ ಸಿಲಿಂಡರ್ ಗೆ ಮಿನಿ ಬಲ್ಕ್ ಎಂದು ಹೆಸರಿಡಲಾಗಿದ್ದು, ಮುಖ್ಯವಾಗಿ ವಾಣಿಜ್ಯ ಬಳಕೆಗಾಗಿಯೇ ಈ ಸಿಲಿಂಡರ್ ಅನ್ನು ಬಿಡುಗಡೆ ಮಾಡಲಾಗಿದೆ. ನಿನ್ನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ  ಜಂಬೋ ಸಿಲಿಂಡರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿಲಿಂಡರ್ ಬಳಕೆಗೆ ಯಾವುದೇ ರೀತಿಯ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಐಒಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಐಒಸಿಯ ತಮಿಳುನಾಡು ಮತ್ತು ಪುದುಚೇರಿ ವಲಯದ ಕಾರ್ಯ ನಿರ್ವಾಹಕ  ನಿರ್ದೇಶಕ ಆರ್ ಸೀತಾರಥನ್ ಅವರು, ಈ ಜಂಬೋ ಸಿಲಿಂಡರ್ ವಾಣಿಜ್ಯ ಬಳಕೆ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ.  ಸಿಲಿಂಡರ್ ನ ಗಾತ್ರ ದೊಡ್ಡದಾಗಿದ್ದರೂ ಸಾಗಣೆ ಮತ್ತು ಸ್ಥಳಾಂತರ ಕಷ್ಟದಾಯಕವಲ್ಲ. ಈ ಸಿಲಿಂಡರ್ ಗಳನ್ನು ಬೇಗನೇ ಬದಲಾಯಿಸಬಹುದು ಎಂದು ಎಂದು ಹೇಳಿದರು.

ಅಂತೆಯೇ ಪ್ರಸ್ತುತ ಇಂಡೇನ್ ಗ್ಯಾಸ್ ಏಜೆನ್ಸಿ ಗ್ರಾಮೀಣ ಮತ್ತು ಪರ್ವತ ಪ್ರದೇಶಗಳಿಗಾಗಿ ಐದು ಕೆಜಿ ತೂಕದ ಸಿಲಿಂಡರ್ ಗಳನ್ನು ಪರಿಚಯಿಸಿದ್ದು, ಗೃಹ ಬಳಕೆಗಾಗಿ 14.2 ಕೆಜಿ ತೂಕದ ಸಿಲಿಂಡರ್ ಗಳನ್ನು ಪೂರೈಕೆ ಮಾಡುತ್ತಿದೆ.  ವಾಣಿಜ್ಯ ಬಳಕೆಗಾಗಿ 19ಕೆಜಿ, 45ಕೆಜಿ ಮತ್ತು 450 ಕೆಜಿ ತೂಕದ ಸಿಲಿಂಡರ್ ಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com